ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಟ್ರಾಫಿಕ್ ಕಿರಿಕಿಯಿಂದಾಗಿ ಬಹಳಷ್ಟು ಜನರು ಕಾರು, ಬೈಕ್ ಬಿಟ್ಟು ನಮ್ಮ ಮೆಟ್ರೋವನ್ನೇ ಹತ್ತುತ್ತಿದ್ದರು. ಆದ್ರೆ, ಇದೀಗ ನಮ್ಮ ಮೆಟ್ರೋ ತನ್ನ ಪ್ರಯಾಣಿಕರಿಗೆ ದರ ಏರಿಕೆ ಶಾಕ್ ಕೊಟ್ಟಿದೆ. ಹೀಗಾಗಿ ಪ್ರಯಾಣಿಕರು ಮೆಟ್ರೋವನ್ನೇ ಧಿಕ್ಕರಿಸಿದ್ದಾರೆ.
ಟಿಕೆಟ್ ದರವನ್ನು ಏರಿಕೆ ಮಾಡಿದ್ದರಿಂದ ಆಕ್ರೋಶಗೊಂಡಿರುವ ಪ್ರಯಾಣಿಕರು, ಮೆಟ್ರೋದತ್ತ ಸುಳಿಯುತ್ತಿಲ್ಲ. ಮೆಟ್ರೋಗೆ ನೀಡುವ ಹಣಕ್ಕಿಂತ ಆಟೋ, ಬೈಕ್ ಬೆಸ್ಟ್ ಎನ್ನುತ್ತಿದ್ದಾರೆ. ಹೀಗಾಗಿ ಟಿಕೆಟ್ ದರ ಏರಿಕೆಯಾದ ಬೆನ್ನಲ್ಲೇ ಮೆಟ್ರೋನಲ್ಲಿ ಪ್ರಯಾಣಿಸುವವರ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿದೆ. ಪ್ರಯಾಣಿಕರ ಸಂಖ್ಯೆ 35% ರಿಂದ 40% ರಷ್ಟು ಕಡಿಮೆಯಾಗಿದೆ.
ದರ ಏರಿಕೆ ಆದ ಮೇಲೆ ಪ್ರತಿದಿನ 6 ರಿಂದ 7 ಲಕ್ಷ ಪ್ರಯಾಣಿಕರು ಮಾತ್ರ ಸಂಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.