HEALTH | ಹತ್ತಾರು ರೀಲ್ಸ್‌ ನೋಡದೇ ಹೋದ್ರೆ ನಿದ್ದೆನೇ ಬರೋದಿಲ್ವಾ? ಇಂದೇ ಈ ಅಭ್ಯಾಸ ಬಿಟ್ಟುಬಿಡಿ

ಅನೇಕ ಜನರು ಏಕಾಂಗಿಯಾಗಿ ಇಲ್ಲವೇ ಕುಟುಂಬದೊಂದಿಗೆ ರೀಲ್ಸ್​ ವೀಕ್ಷಿಸುತ್ತಾರೆ. ರಾತ್ರಿ ವೇಳೆ ಸಿಸ್ಟಂನಲ್ಲಿ ಕೆಲಸ ಮಾಡುವರು ಹಾಗೂ ಟಿವಿ ನೋಡುವವರಿಗಿಂತಲೂ ಮೊಬೈಲ್​ನಲ್ಲಿ ರೀಲ್ಸ್​ ನೋಡುವವರೇ ಹೆಚ್ಚು. ಇದು ದಿನದಿಂದ ದಿನಕ್ಕೆ ಚಟವಾಗಿ ಬದಲಾಗುತ್ತದೆ ಎಂದು ತಜ್ಞರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆ ಸಮಯದಲ್ಲಿ ಫೋನ್ ಇಲ್ಲದಿದ್ದರೆ, ರೀಲ್ಸ್​ ವೀಕ್ಷಿಸಲು ಸಾಧ್ಯವಾಗದಿದ್ದರೂ, ಕಿರಿಕಿರಿ ಮತ್ತು ಅಸಹನೆ ಅವರಲ್ಲಿ ಮೂಡುತ್ತದೆ.

ಅದರಲ್ಲೂ ರೀಲ್ಸ್ ವೀಕ್ಷಿಸುವುದನ್ನು ರೂಢಿಯಾಗಿಸಿಕೊಂಡರೆ, ಅದರ ಪರಿಣಾಮ ಜೀವನಶೈಲಿಯ ಮೇಲೆ ಹೆಚ್ಚು. ಇದರಿಂದ ಭಾವನೆಗಳು ಹತೋಟಿಗೆ ಬರುವುದಿಲ್ಲ. ರೀಲ್ಸ್ ವೀಕ್ಷಿಸುವುದನ್ನು ಬಿಟ್ಟರೆ ಏನೋ ಕಳೆದುಕೊಂಡಂತೆ ಆಗುತ್ತದೆ ಎಂದು ಸಂಶೋಧನೆಯು ತಿಳಿಸುತ್ತದೆ. ಈ ಸೋಶಿಯಲ್​ ಮೀಡಿಯಾದ ವಿಷಯಗಳ ಪ್ರಭಾವದಿಂದ ಜನರು ಕೆಲವೊಮ್ಮೆ ಸಂತೋಷವಾಗಿರುತ್ತಾರೆ. ಮತ್ತೆ ಕೆಲವೊಮ್ಮೆ ಒತ್ತಡ ಹಾಗೂ ಆತಂಕ ಅವರಿಗೆ ಕಾಡುತ್ತದೆ ಎಂಬುದು ಬಹಿರಂಗವಾಗಿದೆ. 20 ರಿಂದ 40 ವರ್ಷ ವಯಸ್ಸಿನವರು ಖಿನ್ನತೆಗೆ ಒಳಗಾಗಲು ಮುಖ್ಯ ಕಾರಣವೇನೆಂದರೆ, ರಾತ್ರಿ ಸಮಯದಲ್ಲಿ ಫೋನ್ ವೀಕ್ಷಿಸಿ ತುಂಬಾ ಲೇಟ್ ಆಗಿ ಮಲಗುತ್ತಾರೆ. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ತೋರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!