ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ.
ಹೊಸದಾಗಿ ಮಂಡಿಸಲಾದ ಆದಾಯ ತೆರಿಗೆ ಮಸೂದೆ 2025 ಅನ್ನು ಪರಿಶೀಲಿಸಲು ಸ್ಥಾಯಿ ಸಮಿತಿಯನ್ನು ರಚಿಸುವಂತೆ ಹಣಕಾಸು ಸಚಿವರು ಲೋಕಸಭಾ ಸ್ಪೀಕರ್ಗೆ ಮನವಿ ಮಾಡಿದ್ದಾರೆ.
ಅಸ್ತಿತ್ವದಲ್ಲಿರುವ 1961ರ ಆದಾಯ ತೆರಿಗೆ ಕಾಯ್ದೆಯು 298 ವಿಭಾಗಗಳನ್ನು ಹೊಂದಿದ್ದರೆ ನೂತನ ಆದಾಯ ತೆರಿಗೆ ಮಸೂದೆಯು 536 ವಿಭಾಗಗಳನ್ನು ಒಳಗೊಂಡಿದೆ.