ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೂಟ್ಯೂಬ್ ರಣವೀರ್ ಅಲಹಬಾದಿಯಾ ಜನಪ್ರಿಯ ತಾರೆ, ಸಚಿವರು, ನಾಯಕರು ಸೇರಿದಂತೆ ಹಲವರ ಸಂದರ್ಶನ ನಡೆಸಿ ಭಾರಿ ಪ್ರಖ್ಯಾತಿ ಪಡೆದಿದ್ದರು. ಆದರೆ ಇಂಡಿಯಾ ಗಾಟ್ ಲ್ಯಾಟೆಂಟ್ ಯೂಟ್ಯೂಬ್ ಶೋನಲ್ಲಿ ಕೇಳಿದ ಅಸಂಬದ್ಧ ಪ್ರಶ್ನೆ ಕೇಳಿ ವಿವಾದ ಸೃಷ್ಟಿಸಿ, ತನ್ನ ಜನಪ್ರಿಯತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ.
ರಣವೀರ್ ವಿರುದ್ಧ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳು, ನಾಯಕರು ಸೇರಿ ಎಲ್ಲರು ಆಕ್ರೋಶ ಹೊರಹಾಕಿದ್ದಾರೆ. ಇದರ ನಡುವೆ ರಣವೀರ್ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಕಳೆದುಕೊಂಡಿದ್ದಾರೆ. ಇಷ್ಟೇ ಅಲ್ಲ ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ ಕೂಡ ರಣವೀರ್ ಅಲಹಾಬಾದಿಯಾನನ್ನು ಸೋಶಿಯಲ್ ಮೀಡಿಯಾದಲ್ಲಿ ಅನ್ಫಾಲೋ ಮಾಡಿದ್ದಾರೆ .
ಇನ್ಸ್ಟಾಗ್ರಾಂನಲ್ಲಿ ಯುವರಾಜ್ ಸಿಂಗ್ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ರಣವೀರ್ನನ್ನು ಅನ್ಫಾಲೋ ಮಾಡಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ಕುರಿತು ಸ್ಕ್ರೀನ್ಶಾಟ್ ಪೋಸ್ಟ್ ಮಾಡಿ ಹಲವರು ಪ್ರತಿಕ್ರಿಯಿಸಿದ್ದಾರೆ. ರಣವೀರ್ ಸಭ್ಯನಂತೆ ಫೋಸ್ ಕೊಟ್ಟಿದ್ದರು. ಆದರೆ ಅಸಲಿ ಮುಖ ಬಯಲಾಗಿದೆ. ಇಂತವರನ್ನು ಫಾಲೋ ಮಾಡಲು ಅಸಹ್ಯವಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸೈಬರ್ ಸೆಲ್ನಿಂದ 2ನೇ ಸಮನ್ಸ್
ಇಂಡಿಯಾಸ್ ಗಾಟ್ ಲೇಟೆಂಟ್ ಪ್ರಕರಣದಲ್ಲಿ ಯೂಟ್ಯೂಬರ್ ಮತ್ತು ಹಾಸ್ಯನಟ ಸಮಯ್ ರೈನಾಗೆ ಮಹಾರಾಷ್ಟ್ರ ಸೈಬರ್ ಸೆಲ್ ಎರಡನೇ ಸಮನ್ಸ್ ಕಳುಹಿಸಿದೆ. ಫೆಬ್ರವರಿ 17 ರಂದು ಹಾಜರಾಗುವಂತೆ ಸೂಚಿಸಲಾಗಿದೆ. ಪಾಡ್ಕ್ಯಾಸ್ಟರ್ ರಣವೀರ್ ಅಲ್ಲಾಬಾದಿಯಾ ಅವರ ಹೇಳಿಕೆಯಿಂದ ಉಂಟಾದ ವಿವಾದದ ನಡುವೆ ಈ ವಾರ ಎರಡನೇ ಬಾರಿಗೆ ಸಮನ್ಸ್ ನೀಡಲಾಗಿದೆ.
ರಾಷ್ಟ್ರೀಯ ಮಹಿಳಾ ಆಯೋಗ (NCW) ಮಂಗಳವಾರ ಅಲ್ಲಾಬಾದಿಯಾ, ರೈನಾ, ಅಪೂರ್ವ ಮಖಿಜಾ, ಜಸ್ಪ್ರೀತ್ ಸಿಂಗ್ ಮತ್ತು ಆಶೀಶ್ ಚಂಚ್ಲಾನಿ ಹಾಗೂ ಕಾರ್ಯಕ್ರಮದ ನಿರ್ಮಾಪಕರಾದ ತುಷಾರ್ ಪೂಜಾರಿ ಮತ್ತು ಸೌರಭ್ ಬೋತ್ರಾ ಅವರನ್ನು ಫೆಬ್ರವರಿ 17 ರಂದು ದೆಹಲಿಯಲ್ಲಿ ಹಾಜರಾಗುವಂತೆ ಕೇಳಿದೆ.
ಈ ಮಧ್ಯೆ, ಮಹಾರಾಷ್ಟ್ರ ಸೈಬರ್ ಇಲಾಖೆ 40 ಕ್ಕೂ ಹೆಚ್ಚು ಜನರಿಗೆ ಸಮನ್ಸ್ ನೀಡಿದೆ. ಪ್ರಕರಣದ ತನಿಖೆಗೆ ಸೇರುವಂತೆ ಕೇಳಿದೆ. 40 ಜನರಲ್ಲಿ ಕಾರ್ಯಕ್ರಮದ ಹಿಂದಿನ ಸಂಚಿಕೆಗಳಲ್ಲಿ ಭಾಗವಹಿಸಿದವರು ಮತ್ತು ತೀರ್ಪುಗಾರರು ಸೇರಿದ್ದಾರೆ. ಗುವಾಹಟಿ ಪೊಲೀಸರು ಅಲ್ಲಾಬಾದಿಯಾ ಮತ್ತು ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಮುಂಬೈನಲ್ಲಿ ಒಂದು ತಂಡವು ವಿಷಯವನ್ನು ತನಿಖೆ ಮಾಡುತ್ತಿದೆ.