SHOCKING | ಚಿಂತಾಮಣಿಯಲ್ಲಿ ಒಂದೇ ದಿನ ಮೂರು ಮರ್ಡರ್: ಬೆಚ್ಚಿ ಬಿದ್ದ ಜನತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಕಳೆದ 24 ಗಂಟೆಗಳಲ್ಲಿ ಮೂವರ ವ್ಯಕ್ತಿಗಳ ಭೀಕರವಾದ ಮರ್ಡರ್ ಆಗಿದ್ದು, ನಿನ್ನೆ ರಾತ್ರಿ ಇಂದು ಬೆಳಿಗ್ಗೆ ಹಾಗೂ ಇದೀಗ ಮಧ್ಯಾಹ್ನ ಸೇರಿದಂತೆ ಒಟ್ಟು ಮೂವರ ಭೀಕರ ಕೊಲೆಯಾಗಿದೆ . ಜನತೆ ಬೆಚ್ಚಿಬಿದ್ದಿದ್ದಾರೆ.

ಚಿಂತಾಮಣಿಯಲ್ಲಿ ನಿನ್ನೆ ರಾತ್ರಿ, ಇಂದು ಬೆಳಿಗ್ಗೆ ಮತ್ತು ಮಧ್ಯಾಹ್ನ ಮೂವರ ಮೃತದೇಹಗಳು ಪತ್ತೆಯಾಗಿವೆ. ನಿನ್ನೆ ರಾತ್ರಿ ರಾಮಸ್ವಾಮಿ ಎಂಬಾತನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಇಂದು ಬೆಳಗ್ಗೆ ವ್ಯಕ್ತಿಯ ರುಂಡವನ್ನು ಕತ್ತರಿಸಿ ಬರ್ಬರವಾಗಿ ಹತ್ಯೆಗೈಯಲಾಗಿದೆ.ಇದೀಗ ಚಿಂತಾಮಣಿಯ ವೆಂಕಟಗಿರಿ ಕೋಟೆ ಬಡಾವಣೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಇದು ಕೂಡ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!