ಹೊಸದಿಗಂತ ವರದಿ, ಕಾರವಾರ:
ಆಟೋ ರಿಕ್ಷಾವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದು ಆಟೋ ಚಾಲಕನ್ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕಾರವಾರ ಕೋಡಿಭಾಗ ನಿವಾಸಿ ನಾಗರಾಜ ಮಂಜುನಾಥ ಸಿರ್ಸಿಕರ್ (34) ಬಂದಿತ ಆರೋಪಿಯಾಗಿದ್ದು ಈತನಿಂದ 2 ಲಕ್ಷ ಮೌಲ್ಯದ ಸುಮಾರು 976 ಗ್ರಾಂ ಗಾಂಜಾ 500 ರೂಪಾಯಿ ನಗದು ಹಣ ಮತ್ತು 2 ಲಕ್ಷ ರೂಪಾಯಿ ಬೆಲೆಯ ಆಟೋ ರಿಕ್ಷಾ ವಶಕ್ಕೆ ಪಡೆಯಲಾಗಿದೆ.
ಆರೋಪಿತನು ತನ್ನ ಕೆ.ಎ30ಎ5457 ನೋಂದಣಿ ಸಂಖ್ಯೆಯ ಆಟೋ ರಿಕ್ಷಾದಲ್ಲಿ ಮಾದಕ ವಸ್ತು ಗಾಂಜಾ ತಂದು ನಗರದ ದೋಬಿಘಾಟ ಸ್ಮಶಾನ ಭೂಮಿ ಸಮೀಪ ಆಟೋ ರಿಕ್ಷಾ ನಿಲ್ಲಿಸಿ ಗಿರಾಕಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು ಕಾರವಾರ ನಗರ ಠಾಣೆ ಪಿ.ಎಸ್.ಐ ರವೀಂದ್ರ ಬಿರಾದಾರ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಎನ್. ಡಿ.ಪಿ.ಎಸ್ ಕಾಯ್ದೆ
1985 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾರವಾರ ನಗರ ಪೊಲೀಸರ ಕಾರ್ಯಾಚರಣೆಗೆ ಪೊಲೀಸ್ ವರಿಷ್ಠ ಎಂ ನಾರಾಯಣ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.