ಮಹಾ ಕುಂಭಮೇಳದಿಂದ ಉತ್ತರ ಪ್ರದೇಶ ಆರ್ಥಿಕತೆಗೆ 3 ಲಕ್ಷ ಕೋಟಿ ರೂ. ಲಾಭ: ಸಿಎಂ ಯೋಗಿ ಅದಿತ್ಯನಾಥ್‌

ಹೊಸದಿಗಂತ ಡಿಜಿಟಲ್ ಡೆಸ್ಕ್;

ಮಹಾ ಕುಂಭಮೇಳದಿಂದ ಉತ್ತರ ಪ್ರದೇಶದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ. ಲಾಭವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ಹೇಳಿದ್ದಾರೆ.

ಇಂದು ಲಕ್ನೋದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸಮ್ಮುಖದಲ್ಲಿ 114 ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅದಿತ್ಯನಾಥ್‌, ನಮಗೆ ಪ್ರತಿ 6 ವರ್ಷಗಳಿಗೊಮ್ಮೆ ಕುಂಭ ಮತ್ತು ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭವನ್ನು ಆಯೋಜಿಸುವ ಅವಕಾಶ ಸಿಗುತ್ತದೆ. ನಾವು ಮಾಡುವ ಎಲ್ಲಾ ಚಟುವಟಿಕೆಗಳು ನಮ್ಮ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತವೆ ಎಂದರು.

ಕುಂಭಮೇಳವನ್ನು ಆಯೋಜಿಸಲು ಒಟ್ಟು 1500 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಕ್ಕೆ ಪ್ರತಿಯಾಗಿ ನಮ್ಮ ಆರ್ಥಿಕತೆ 3 ಲಕ್ಷ ಕೋಟಿ ರೂ.ಗಳ ಲಾಭ ಪಡೆದಿದೆ. 1,500 ಕೋಟಿ ರೂ. ಹಣವನ್ನು ಕುಂಭಮೇಳಕ್ಕೆ ಮಾತ್ರ ಖರ್ಚು ಮಾಡಿಲ್ಲ. ಪ್ರಯಾಗ್‌ರಾಜ್ ನಗರದ ನವೀಕರಣಕ್ಕೆ ಖರ್ಚು ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!