ಬೇರೆ ದೇಶಗಳಲ್ಲಿ ರಾಜ್ಯದ ರೋಸ್‌ಗಳಿಗೆ ಡಿಮ್ಯಾಂಡ್‌, 14 ದಿನದಲ್ಲಿ 10 ಕೋಟಿ ರೂ. ವಹಿವಾಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೇಮಿಗಳ ದಿನ ಹಿನ್ನೆಲೆಯಲ್ಲಿ ಬೆಂಗಳೂರಿನ ರೋಸ್‌ಗಳಿಗೆ ಕೇವಲ ಭಾರತವಲ್ಲ, ವಿದೇಶದೆಲ್ಲೆಡೆ ಭಾರೀ ಡಿಮ್ಯಾಂಡ್ ಉಂಟಾಗಿದೆ. ಒಂದು ದಿನಕ್ಕೆ 7-8 ಲಕ್ಷ ರಾಜಧಾನಿಯ ರೋಸ್‌ಗಳು ಮಾರಾಟವಾಗಿ, ದಿನವೊಂದಕ್ಕೆ ಒಂದು ಕೋಟಿಗೂ ಹೆಚ್ಚು ಆದಾಯ ಬಂದಿದ್ದು, ಹೊಸ ದಾಖಲೆ ನಿರ್ಮಿಸಿದೆ.

National Rose Month - National Todayನಿನ್ನೆ ಪ್ರೇಮಿಗಳ ದಿನ. ಪ್ರೀತಿಸುವ ಹೃದಯಗಳು ಇನ್ನಷ್ಟು ಸನ್ನಿಹವಾಗುವ ಕಾಲ. ಈ ಹಿನ್ನೆಲೆ ಪ್ರೀತಿಗೆ ಸಂಕೇತವಾಗಿರುವ ಗುಲಾಬಿ ಹೂಗಳಿಗೆ ಸಿಲಿಕಾನ್ ಸಿಟಿಯಲ್ಲಿ ಫುಲ್ ಡಿಮ್ಯಾಂಡ್ ಹೆಚ್ಚಾಗಿದೆ. ಅದರಲ್ಲೂ, ಬೆಂಗಳೂರಿನ ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಗುಲಾಬಿಗಳಿಗೆ ಕೇವಲ ದೇಶವಲ್ಲ ವಿದೇಶಗಳಿಂದಲೂ ಬೇಡಿಕೆ ಬಂದಿದೆ.

The All You Need To Know Guide About Red Roses | Interfloraನಮ್ಮ ಬೆಂಗಳೂರಿನ ಡಚ್ ರೋಸ್‌ಗಳು ದುಬೈ, ಸಿಂಗಾಪುರ್, ಮಲೇಶಿಯಾ, ನ್ಯೂಜಿಲೆಂಡ್ ಸೇರಿದಂತೆ ವಿದೇಶಗಳಿಗೂ ಹೋಗಿದೆ. ಹೆಬ್ಬಾಳದ ಅಂತರರಾಷ್ಟ್ರೀಯ ಪುಷ್ಪ ಹರಾಜು ಬೆಂಗಳೂರು ನಿಯಮಿತದಲ್ಲಿ ಭರ್ಜರಿ ಡಿಮ್ಯಾಂಡ್ ಉಂಟಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!