ಸೀರೆ, ವಜ್ರ ಖಚಿತ ಡಾಬು, ಬಂಗಾರದ ಕಿರೀಟ: ಜಯಲಲಿತಾ ಬೆಲೆ ಬಾಳುವ ವಸ್ತುಗಳು ತಮಿಳುನಾಡಿಗೆ ವಾಪಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್;

ತಮಿಳುನಾಡಿನ ಮಾಜಿ ಮುಖ್ಯಂತ್ರಿ ದಿವಂಗತ ಜಯಲಲಿತಾ ಅವರ ಬೆಲೆ ಬಾಳುವ ವಸ್ತುಗಳನ್ನು ತಮಿಳುನಾಡಿನ ಸರ್ಕಾರದ ಸುಪರ್ದಿಗೆ ನೀಡಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್​ಪಿಪಿ ಕಿರಣ್​ ಜವಳಿ, ತಮಿಳುನಾಡು ಸರ್ಕಾರಕ್ಕೆ ಚಿನ್ನಾಭರಣವನ್ನು ಮರಳಿ ಕೊಡುವ ಆದೇಶವಾಗಿದೆ ಈ ಹಿನ್ನೆಲೆಯಲ್ಲಿ ಸರ್ಕಾರದ ಸುಪರ್ದಿಗೆ ಅವುಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಸೀರೆ, ಫ್ರಿಡ್ಜ್​, ಚಪ್ಪಲಿ ಅಂತ ಬರೆದಿದ್ದರು. ತಮಿಳುನಾಡು ವಿಜಲೇನ್ಸ್ ಅಧಿಕಾರಿಗಳು ಬಂದಿದ್ದರು. ಅವರ ಸಮಕ್ಷಮದಲ್ಲಿ ಪರಿಶೀಲನೆ ಮಾಡಲಾಗಿದ್ದು. ಒಟ್ಟು 11,344 ರೇಷ್ಮೆ ಸೀರೆ, 10 ಟಿವಿ, 12 ಫ್ರಿಡ್ಜ್​, 8ವಿಸಆರ್ , 1 ವಿಡಿಯೋ ಕ್ಯಾಮರಾ, 4 ಸಿಡಿ ಪ್ಲೇಯರ್ಸ್​, 2 ಆಡಿಯೋ ಡೆಕ್ಸ್​, 24 ಟೇಪ್​ ರೆಕಾರ್ಡರ್, 1040 ವಿಡಿಯೋ ಕ್ಯಾಸೆಟ್​, ಐದು ಕಬ್ಬಿಣದ ಲಾಕರ್ಸ್​​ಗಳನ್ನು ಸರ್ಕಾರದ ಸುಪರ್ದಿಗೆ ನೀಡಲಾಗಿದೆ.

ಇದರ ಜೊತೆಗೆ ಮಾಜಿ ಸಿಎಂ ಜಯಲಲಿತಾಗೆ ಸಂಬಂಧಿಸಿದ ಒಟ್ಟು 27 ಕೆಜಿ ವಸ್ತುಗಳನ್ನು ಕೂಡ ಸರ್ಕಾರದ ಸುಪರ್ದಿಗೆ ನೀಡಲಾಗಿದೆ.

ಸೀಜ್ ಮಾಡಿದ್ದ ಬಸ್​ ಕೂಡ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದೆ. 1526 ಎಕರೆ ಜಾಗ, ತಂಜಾವೂರು ಸೇರಿದಂತೆ ಬೇರೆ ಬೇರೆ ಕಡೆ ಜಮೀನು ಇದೆ. ಅದನ್ನು ಕೂಡ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ.

ಡಾಬು, ಖಡ್ಗ, ಒಂದು ಕೆಜಿ ಚಿನ್ನದ ಕಿರೀಟ, ಗೋಲ್ಡ್​ ವಾಚ್​, ಪೆನ್​, ಸೀರೆ ಸೇರಿ ಒಟ್ಟು 1606 ವಸ್ತುಗಳನ್ನು ನೀಡಲಾಗಿದೆ ಒಟ್ಟು 25 ಕಿಲೋ ಚಿನ್ನಾಭರಣ ಮತ್ತು ವಜ್ರ, ಒಂದು ಕೆ.ಜಿ 85 ಲಕ್ಷದಂತೆ ಒಟ್ಟು300 ರಿಂದ 350 ಕೋಟಿ ಬೆಲೆ ಬಾಳವ ಚಿನ್ನಭರಣಗಳನ್ನು ಸರ್ಕಾರದ ಸುಪರ್ದಿಗೆ ನೀಡಲಾಗಿದೆ ಎಂದು ಕಿರಣ್​ ಜವಳಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!