ಮೇಷ
ಅನ್ಯರ ಮೂಲಕ ನಿಮ್ಮ ವ್ಯವಹಾರ ನಡೆಸಲು ಹೋಗದಿರಿ. ಪ್ರತಿಕೂಲವಾದೀತು. ನಿಮ್ಮ ವ್ಯವಹಾರ ನೀವೇ ನೋಡಿಕೊಳ್ಳಿ.
ವೃಷಭ
ನಿಮ್ಮ ವರ್ತನೆ ಕೌಟುಂಬಿಕ ಸೌಹಾರ್ದ ಕೆಡಿಸಬಹುದು. ಸಹನೆ ಇರಲಿ. ಆರೋಗ್ಯ ಸಮಸ್ಯೆ ನಿವಾರಣೆಯಾಗಿ ಮನಸ್ಸಿಗೆ ನಿರಾಳತೆ.
ಮಿಥುನ
ಕೋಪತಾಪ ನಿಯಂತ್ರಿಸಿ. -ಲಪ್ರದ ವಿಷಯದತ್ತ ನಿಮ್ಮ ಸಾಮರ್ಥ್ಯ ಬಳಸಿಕೊಳ್ಳಿ. ಹೊಟ್ಟೆ ಕೆಡಿಸುವ ಆಹಾರ ಸೇವಿಸಲು ಹೋಗಬೇಡಿ.
ಕಟಕ
ಎಲ್ಲರ ಜತೆ ಬೆರೆತು ವ್ಯವಹರಿಸುವುದರಿಂದ ಹಿತವಿದೆ. ನನ್ನ ದಾರಿ ನನಗೆ ಎಂಬ ಧೋರಣೆ ಬಿಡಿ. ಸಂತಾನ ಬಯಸುವವರಿಗೆ ಶುಭ ಬೆಳವಣಿಗೆ.
ಸಿಂಹ
ಬಾಕಿ ಇರುವ ಕೆಲಸ ಮುಗಿಸಿರಿ. ಆದರೆ ಕೆಲಸದ ಒತ್ತಡ ನಿಮ್ಮ ನೆಮ್ಮದಿ ಹಾಳು ಮಾಡಲು ಅವಕಾಶ ಕೊಡದಿರಿ. ಮನರಂಜನೆಯೂ ಇರಲಿ.
ಕನ್ಯಾ
ಕುಟುಂಬದ ಜತೆ ಹೆಚ್ಚು ಸಮಯ ಕಳೆಯಿರಿ. ಅವರ ಬೇಕುಬೇಡ ಆಲಿಸಿರಿ. ನಿಮ್ಮ ತಾಳ್ಮೆ ಪರೀಕ್ಷಿಸುವ ಬೆಳವಣಿಗೆ ಉಂಟಾದೀತು.
ತುಲಾ
ಇತರರಿಗಾಗಿ ನಿಮ್ಮ ಸಮಯ, ಸೌಲಭ್ಯ ವ್ಯಯಿಸಬೇಕಾದೀತು. ತಾಳ್ಮೆ ಮತ್ತು ಬದ್ಧತೆ ಎರಡನ್ನೂ ಬಿಡದಿರಿ. ಕೌಟುಂಬಿಕ ಕಾಲಕ್ಷೇಪ.
ವೃಶ್ಚಿಕ
ಹಳೆಯ ಕೆಲಸ ಪೂರ್ಣಗೊಂಡು ನಿರಾಳತೆ. ಹೊಸ ಯೋಜನೆ ಅಳವಡಿಸಲು ಸಕಾಲ. ಕುಟುಂಬಸ್ಥರ ಸಂಗಡ ಸಂತೋಷ.
ಧನು
ನಿಮ್ಮ ದೈನಂದಿನ ವ್ಯವಹಾರದಲ್ಲಿ ಮಹತ್ವದ ಬದಲಾವಣೆ. ವಾಹನ ಅಥವಾ ಆಸ್ತಿ ಖರೀದಿಗೆ ಸಕಾಲ. ಕಷ್ಟವೆನಿಸಿದ ಕಾರ್ಯ ಪೂರ್ಣ.
ಮಕರ
ಮಹತ್ವದ ವ್ಯವಹಾರ ದಲ್ಲಿ ತಾಳ್ಮೆಯಿಂದ ವರ್ತಿಸಿ. ದುಡುಕು ಕೆಟ್ಟ ಪರಿಣಾಮ ಉಂಟು ಮಾಡೀತು. ಕೌಟುಂಬಿಕ ವಿರಸ, ಕಲಹ ಸಂಭವ.
ಕುಂಭ
ದೈನಂದಿನ ಹೊಣೆ ನಿರ್ವಹಿಸುವಲ್ಲೆ ದಿನ ಕಳೆಯುವಿರಿ. ವಿಶೇಷ ಇಲ್ಲದೆ ಕಳೆಯುವುದು. ಬಂಧುಗಳ ರಗಳೆ ನೆಮ್ಮದಿ ಕಲಕಬಹುದು.
ಮೀನ
ಅನಿವಾರ್ಯ ಖರ್ಚು ಒದಗಲಿದೆ. ಶೀತ ತರುವ ಪಾನೀಯದಿಂದ ದೂರವಿರಿ. ಕೌಟುಂಬಿಕ ಜವಾಬ್ದಾರಿ ಸರಿಯಾಗಿ ನಿಭಾಯಿಸುವಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ