ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್: ತಿಪಟೂರಿನಲ್ಲಿ ವ್ಯಕ್ತಿಯ ಬಂಧನ

ಹೊಸದಿಗಂತ ವರದಿ, ತುಮಕೂರು

ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ಅನ್ಯ ವರ್ಗದ ಹಾಗೂ ಧರ್ಮದ ಧಾರ್ಮೀಕ ನಂಬಿಕೆಗಳಿಗೆ ಧಕ್ಕೆ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ ನ್ನು ಹಂಚಿಕೆ ಮಾಡುತ್ತಿದ್ದು ಮುಸ್ಲಿಂ ವ್ಯಕ್ತಿಯನ್ನು ತಿಪಟೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ನಗರದ ಗಾಂಧಿನಗರ ನಿವಾಸಿ ಉಮರ್ ಫಾರಕ್ (41) ಲಾರಿ ಚಾಲಕನಾಗಿದ್ದು ಫೇಸ್‌ಬುಕ್‌ನಲ್ಲಿ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಲಾಗುತ್ತಿದ್ದು ಹಾಗೂ ವಿಕೃತ್ತಿಯನ್ನು ಮೆರೆದಿದ್ದ. ಅನ್ಯ ಧರ್ಮಗಳ ಬಗ್ಗೆ ವಿರೋಧಿ ಗುಂಪುಗಳನ್ನು ರಚನೆ ಮಾಡಿರುವುದನ್ನು ಗಮನಿಸಿದ ಪೋಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಾಲಿಸಿಕೊಂಡು ಬಿಎನ್‌ಎಸ್ ರೀತ್ಯಾ ಕಲಂ 299ರಲ್ಲಿ ಬಂಧಿಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!