ನಾವು ಕಾಣುವ ಕೆಲವೊಂದು ಕನಸುಗಳು ನಮಗೆ ಶುಭ ಸೂಚನೆಯನ್ನು ನೀಡಿದರೆ, ಇನ್ನು ಕೆಲವು ಕನಸುಗಳು ಅಶುಭ ಸೂಚನೆಯನ್ನು ನೀಡುತ್ತದೆ. ಭವಿಷ್ಯದ ಕುರಿತು ಕೆಲವೊಂದು ಕನಸುಗಳು ನಮಗೆ ಮಾಹಿತಿಯನ್ನು ನೀಡುತ್ತದೆ. ಹಾಗಿದ್ರೆ ಯಾವೆಲ್ಲಾ ಕನಸುಗಳು ನಮಗೆ ಅದೃಷ್ಟ ತರುತ್ತದೆ? ಯಾವ ಕನಸು ನಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತೆ ಎಂದು ಈಗ ನೋಡೋಣ ಬನ್ನಿ.
ನಮ್ಮ ಕನಸಿನಲ್ಲಿ ಶಂಖ ಮೊಳಗುತ್ತಿರುವುದನ್ನು ನೀವು ನೋಡಿದರೆ, ನೀವು ಶೀಘ್ರದಲ್ಲೇ ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು ಎಂಬುದನ್ನು ಇದು ಸೂಚಿಸುತ್ತದೆ, ಧನಾಗಮನಕ್ಕೂ ಮುನ್ನ ಈ ಕನಸುಗಳು ಬಿದ್ದರೆ ಅದು ಮಂಗಳಕರ ಸೂಚನೆಯಾಗಿದೆ. ಇಂತಹ ಕನಸುಗಳು ನಿಮ್ಮ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ.
ಹಾಗೆಯೇ ಕನಸಿನಲ್ಲಿ ಕೆಂಪು ಬಣ್ಣದ ಸೀರೆ ಧರಿಸಿದ ಮಹಿಳೆಯನ್ನು ನೋಡಿದರೆ ಶುಭವೆಂದು ಹೇಳಲಾಗುತ್ತದೆ. ಮತ್ತು ಇಂತಹ ಕನಸು ನೀವು ಜೀವನದಲ್ಲಿ ಶೀಘ್ರದಲ್ಲೇ ಸಂತೋಷ ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳುವುದರ ಸಂಕೇತವಾಗಿದೆ. ಆದ್ದರಿಂದ ಈ ರೀತಿಯ ಕನಸು ಬಿದ್ದರೆ ಅದನ್ನು ಮರೆಯಬೇಡಿ. ಇದು ನಿಮಗೆ ಒಳ್ಳೆಯದನ್ನೇ ಮಾಡುತ್ತದೆ.
ಹಾಗೆಯೇ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಓರ್ವ ವ್ಯಕ್ತಿಯು ತನ್ನ ಕನಸಿನಲ್ಲಿ ತನ್ನ ಬೆರಳಿನಲ್ಲಿ ಚಿನ್ನದ ಉಂಗುರವನ್ನು ನೋಡಿದರೆ ಆ ವ್ಯಕ್ತಿಯು ಶೀಘ್ರದಲ್ಲೇ ತನಗೆ ಹೊಂದಾಣಿಕೆಯಾಗುವ ಜೀವನ ಸಂಗಾತಿಯನ್ನು ಪಡೆಯುವುದನ್ನು ಸೂಚಿಸುತ್ತದೆ. ಇನ್ನು ಕನಸಿನಲ್ಲಿ ಚಕೋರ ಪಕ್ಷಿಯನ್ನು ನೋಡುವ ವ್ಯಕ್ತಿಯು ಅದೃಷ್ಟಶಾಲಿಯಾಗುತ್ತಾನೆ. ಈ ಪಕ್ಷಿಯ ಕನಸು ನಿಮ್ಮ ಅದೃಷ್ಟದ ಸೂಚನೆಯಾಗಿದೆ.
ಕನಸಿನಲ್ಲಿ ಹಸಿರಿನಿಂದ ತುಂಬಿಕೊಂಡು ನಲಿಯುತ್ತಿರುವ ಜಾಗವನ್ನು ನೋಡುವುದು ಅತ್ಯಂತ ಶುಭ ಸಂಕೇತವಾಗಿದೆ. ಈ ಕನಸು ನೀವು ಶೀಘ್ರದಲ್ಲೇ ಶುಭ ಸಂಕೇತವನ್ನು ಪಡೆಯಬಹುದು ಎಂದು ಹೇಳುತ್ತದೆ. ಆದರೆ, ನೀವು ಕನಸಿನಲ್ಲಿ ಬರಡು ಭೂಮಿಯನ್ನು ನೋಡುವುದು ಅಶುಭ ಸೂಚೆನೆಯಾಗಿದೆ.
ಕನಸಿನಲ್ಲಿ ಮೀನನ್ನು ನೋಡಿದರೆ ನೀವು ಒಳ್ಳೆಯ ಸುದ್ದಿಯನ್ನು ಪಡೆಯಲಿದ್ದೀರಿ ಎಂದರ್ಥ. ಅಷ್ಟು ಮಾತ್ರವಲ್ಲ, ಈ ಕನಸಿನಿಂದ ನೀವು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು. ಇದಲ್ಲದೆ, ನೀವು ಕನಸಿನಲ್ಲಿ ಚಿನ್ನದ ಮೀನುಗಳನ್ನು ನೋಡಿದರೆ, ನೀವು ಪ್ರೀತಿ ಮತ್ತು ಗೌರವವನ್ನು ಪಡೆಯುತ್ತೀರಿ ಎಂದರ್ಥ. ಒಟ್ಟಿನಲ್ಲಿ ಈ ರೀತಿಯ ಎಲ್ಲ ಕನಸುಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತೆ ಎನ್ನಲಾಗಿದೆ.