* ಅಕ್ಕಿ
* ಕೋಸು-1
* ಈರುಳ್ಳಿ-2
* ಟೊಮೆಟೊ-2
* ಹಸಿರು ಮೆಣಸಿನಕಾಯಿ-2-3
* ಶುಂಠಿ-ಬೆಳ್ಳುಳ್ಳಿ ಪೇಸ್ಟ್
* ಎಣ್ಣೆ
* ಸಾಸಿವೆ
* ಜೀರಿಗೆ
* ಕರಿಬೇವು
* ಅರಿಶಿನ ಪುಡಿ
* ಗರಂ ಮಸಾಲ
* ಉಪ್ಪು
* ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಅಕ್ಕಿಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಅಥವಾ ಪಾತ್ರೆಯಲ್ಲಿ ಬೇಯಿಸಿ. ಅನ್ನವು ಉದುರುದುರಾಗಿರಬೇಕು. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ ಅವು ಸಿಡಿದ ನಂತರ ಜೀರಿಗೆ, ಕರಿಬೇವು ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಸೇರಿಸಿ ಮತ್ತು ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ ಸೇರಿಸಿ ಮತ್ತು ಮೃದುವಾಗುವವರೆಗೆ ಬೇಯಿಸಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದು ನಿಮಿಷ ಹುರಿಯಿರಿ ನಂತರ ಕೋಸು ಸೇರಿಸಿ ಮತ್ತು ಅದು ಮೃದುವಾಗುವವರೆಗೆ ಬೇಯಿಸಿ. ಅರಿಶಿನ ಪುಡಿ, ಗರಂ ಮಸಾಲ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೇಯಿಸಿದ ಅನ್ನ ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ. ಕೊತ್ತಂಬರಿ ಸೊಪ್ಪು ಸೇರಿಸಿ. ಇದೀಗ ಬಿಸಿಬಿಸಿಯಾದ ಕ್ಯಾಬೇಜ್ ರೈಸ್ ಸವಿಯಲು ಸಿದ್ದ.