ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣೆಯ ಅಪಾರ್ಟ್ಮೆಂಟ್ ಒಂದರ ಒಂಬತ್ತನೇ ಫ್ಲೋರ್ನಿಂದ ಸಹಿಸಲಾರದಷ್ಟು ದುರ್ನಾತ ಬರುತ್ತಿದ್ದು, ನೆರೆಹೊರೆಯವರು ಮುನ್ಸಿಪಲ್ ಕಾರ್ಪೋರೇಷನ್ ಗಮನಕ್ಕೆ ತಂದಿದ್ದಾರೆ.
ಅವರು ಬಂದು ಬಾಗಿಲು ತೆಗೆಸಿ ನೋಡಿ ಶಾಕ್ ಆಗಿದ್ದಾರೆ. ಏಕೆಂದರೆ ಆ ಫ್ಲಾಟ್ನಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಬೆಕ್ಕುಗಳು ಇವೆ. ಪೊಲೀಸರ ಪ್ರಕಾರ, ಬೀದಿ ಬೆಕ್ಕುಗಳನ್ನು ಕರೆತಂದು ಫ್ಲಾಟ್ ಮಾಲೀಕರೊಬ್ಬರು ಆಹಾರ ನೀಡುತ್ತಿದ್ದಾರೆ. ಬೆಕ್ಕುಗಳು ಸುಧಾರಿಸಿದ ನಂತರ ಅವುಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ, ಬೆಕ್ಕುಗಳಿಂದಾಗಿ ಉಂಟಾಗುವ ಅನೈರ್ಮಲ್ಯದಿಂದಾಗಿ ಸೊಸೈಟಿಯಲ್ಲಿನ ನೆರೆಹೊರೆಯವರು ತೊಂದರೆಗೀಡಾಗಿದ್ದಾರೆ.
ಮಾರ್ವೆಲ್ ಬೌಂಟಿ ಸೊಸೈಟಿಯ ಅಪಾರ್ಟ್ಮೆಂಟ್ ಮಾಲೀಕರು ಬೀದಿಯ ಬೆಕ್ಕುಗಳನ್ನು ಮನೆಗೆ ತಂದು ಆರೈಕೆ ಮಾಡುತ್ತಿದ್ದರು ಮತ್ತು ಅವುಗಳು ಉತ್ತಮವಾದಾಗ ಮತ್ತೆ ಅವುಗಳನ್ನು ಬಿಡುತ್ತಿದ್ದರು. ಇದರಿಂದ ಅಪಾರ್ಟ್ಮೆಂಟ್ನಲ್ಲಿ ಹಲವು ಬೆಕ್ಕುಗಳು ಜಮಾಯಿಸಿದ್ದು, ಅನೈರ್ಮಲ್ಯ ಉಂಟಾಗಿ ಅಕ್ಕಪಕ್ಕದ ಮನೆಯವರಿಗೆ ತೊಂದರೆಯಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
9ನೇ ಮಹಡಿಯಲ್ಲಿರುವ ಫ್ಲಾಟ್ನ ಮಾಲೀಕರು ಆ ಫ್ಲಾಟ್ನಲ್ಲಿ ಹಲವಾರು ಬೆಕ್ಕುಗಳನ್ನು ಸಾಕಿದ್ದಾರೆ. ಇದರ ಪರಿಣಾಮವಾಗಿ ಅಲ್ಲಿ ದುರ್ವಾಸನೆ ಉಂಟಾಗಿದೆ. ದೂರಿನ ನಂತರ, ತಂಡವು ಫ್ಲಾಟ್ಗೆ ಭೇಟಿ ನೀಡಿ, ಎರಡು ದಿನಗಳಲ್ಲಿ ಬೆಕ್ಕುಗಳನ್ನು ಸ್ಥಳಾಂತರಿಸಲು ಫ್ಲಾಟ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.