ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ನಿ ಸ್ನೇಹಿತನ ಜೊತೆ ಪರಾರಿಯಾಗಿರುವುದರಿಂದ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ತುಮಕೂರಿನ ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್ನಲ್ಲಿ ನಡೆದಿದೆ.
ನಾಗೇಶ್ ಎಂಬಾತ ಸೆಲ್ಫಿ ವಿಡಿಯೋ ಮಾಡಿಟ್ಟು ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವನಪ್ಪಿದ್ದಾನೆ.
ಪತಿ ನಾಗೇಶ್ ತನ್ನ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು, ನೇಣಿಗೆ ಶರಣಾಗಿದ್ದಾನೆ. ನನ್ನ ಪತ್ನಿ ರಂಜಿತಾಗೂ ಗೆಳಯ ಭರತ್ಗೂ ಅಕ್ರಮ ಸಂಬಂಧ ಇದೆ. ಅವರು ಈಗ ಪರಾರಿಯಾಗಿದ್ದಾರೆ ಎಂದು ವಿಡಿಯೋ ಮಾಡಿ ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ನನಗೆ ನ್ಯಾಯ ಕೊಡಿಸಿ ಎಂದು ವಿಡಿಯೋದಲ್ಲಿ ಪರಿಪರಿಯಾಗಿ ಕೇಳಿಕೊಂಡಿದ್ದಾನೆ.
12 ವರ್ಷದ ಹಿಂದೆಯೇ ರಂಜಿತಾ ಮತ್ತು ನಾಗೇಶ್ ಪ್ರೀತಿಸಿ ಮದುವೆಯಾಗಿದ್ರು. ಈ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ರು. ರಂಜಿತಾ ಗಂಡ- ಮಕ್ಕಳ ಜೊತೆ ಸುಖವಾಗೇ ಸಂಸಾರ ಮಾಡಿಕೊಂಡು ಹೋಗ್ತಿದ್ದಳು. ಆದ್ರೆ ಅದೇನಾಯ್ತೋ ಏನೋ, ಈಗ ಪತಿ ನಾಗೇಶ್ ನನ್ನ ಹೆಂಡತಿ ರಂಜಿತಾಗೆ ಎರಡು ಮಕ್ಕಳಿದ್ದರೂ ಭರತ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆರೋಪಿಸಿ ವಿಡಿಯೋ ಮಾಡಿಟ್ಟು ಸಾವಿಗೆ ಶರಣಾಗಿದ್ದಾನೆ.
ಅನೈತಿಕ ಸಂಬಂಧ ಅಷ್ಟೇ ಅಲ್ಲದೇ ರಂಜಿತಾ ಮತ್ತು ಭರತ್ ಪರಾರಿಯಾಗಿದ್ದಾರೆ ಎಂದು ವಿಡಿಯೋದಲ್ಲಿ ನಾಗೇಶ್ ಹೇಳಿಕೊಂಡಿದ್ದಾನೆ. ನಾಗೇಶ್ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ನೋಡಿದ ಹಲವು ಸ್ನೇಹಿತರು ಮನೆಯತ್ತ ಬರುವಷ್ಟರಲ್ಲೇ ನಾಗೇಶ್ ಸಾವನಪ್ಪಿದ್ದ. ನಂತರ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಗುಬ್ಬಿ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗೇಶ್ ವಿಡಿಯೋದಲ್ಲಿ ಏನಿತ್ತು?
ನನ್ನ ಪತ್ನಿ ರಂಜಿತಾಗೂ ಮತ್ತು ಗೆಳೆಯ ಭರತ್ಗೂ ಅಕ್ರಮ ಸಂಬಂಧ ಇತ್ತು. ನಾನು ಮನೆಯಲ್ಲಿ ಇಲ್ಲದ ವೇಳೆ ಆತ ನಮ್ಮ ಮನೆಗೆ ಬಂದು ಬಂದು ಹೋಗ್ತಿದ್ದ. ನಾನು ಈಗ ಮೂರ್ನಾಲ್ಕು ದಿನ ಶಬರಿಮಲೆ ಟ್ರಿಪ್ ಹೋದಾಗಲೂ ಇಲ್ಲೇ ಬಂದು ವಾಸವಿದ್ದ. ಅವರಿಬ್ಬರ ಮಧ್ಯೆ ಎಲ್ಲ ರೀತಿಯ ಸಂಬಂಧ ಇದೆ. ಈಗ ನನ್ನ ಪತ್ನಿ ರಂಜಿತಾ ಅವನೊಂದಿಗೆ ಓಡಿ ಹೋಗಿದ್ದಾಳೆ. ಇದರಿಂದ ನನಗೆ ತುಂಬಾ ನೋವಾಗಿದೆ. ನನ್ನ ಸಾವಿಗೆ ನ್ಯಾಯ ಕೊಡಿಸಿ. ನನ್ನ ಸಾವಿಗೆ ಪತ್ನಿ ರಂಜಿತಾ ಮತ್ತು ಆಕೆಯ ಗೆಳೆಯ ಭರತ್ ಕಾರಣ ಎಂದು ವಿಡಿಯೋ ಮಾಡಿಟ್ಟಿದ್ದಾನೆ.
ನಾಗೇಶ್ ಭಾವುಕವಾಗಿಯೇ ವಿಡಿಯೋ ಮಾಡಿಟ್ಟು, ವಿಡಿಯೋದಲ್ಲಿ ತಮ್ಮ ಮಕ್ಕಳ ಭಾವಚಿತ್ರಗಳನ್ನೆಲ್ಲಾ ತೋರಿಸಿ ಕಣ್ಣೀರಾಕಿದ್ದಾರೆ. ದಯವಿಟ್ಟು ಸ್ನೇಹಿತರೇ ನನ್ನ ಪತ್ನಿ ರಂಜಿತಾಗೆ ಮತ್ತು ಭರತ್ಗೆ ಶಿಕ್ಷೆ ಕೊಡಿಸಿ. ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಪರಿಪರಿಯಾಗಿ ಬೇಡಿಕೊಂಡು ವಿಡಿಯೋವನ್ನ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.