ಹೊಸದಿಗಂತ ರೋಣ
ಗದಗ ಜಿಲ್ಲೆಯ ರೋಣ ತಾಲೂಕಿನ ಇಟಗಿ ಹಾಗೂ ಅಬ್ಬಿಗೇರಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ವನ್ಯಜೀವಿ ಗಣತಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ವಿಶೇಷ ಹೈಬ್ರಿಡ್ ಕಾಡು ಬೆಕ್ಕುಗಳು ಪತ್ತೆಯಾಗಿವೆ.
ರೋಣ ಅರಣ್ಯಾಧಿಕಾರಿ ಅನ್ವರ್ ಕೊಲ್ಹಾರ್ ಅವರ ನೇತೃತ್ವದ ತಂಡ ಗಣತಿ ಕಾರ್ಯದಲ್ಲಿ ನಿರತವಾಗಿದ್ದಾಗ ಈ ಅಪರೂಪದ ಪ್ರಾಣಿಗಳು ಕಂಡುಬಂದಿವೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಅವರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹ ಹೈಬ್ರಿಡ್ ಬೆಕ್ಕು ನೆಲಮಂಗಲ ತಾಲೂಕಿನ ಮರಳುಕುಂಟೆ ಗ್ರಾಮದಲ್ಲಿ ಪತ್ತೆಯಾಗಿತ್ತು. ಇದೀಗ ಎರಡನೇ ಬಾರಿಗೆ ರೋಣ ತಾಲೂಕಿನಲ್ಲಿ ಕಂಡುಬಂದಿರುವುದು ಪರಿಸರ ವಿಜ್ಞಾನಿಗಳ ಗಮನ ಸೆಳೆದಿದೆ.



