ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರುತೆರೆ ನಟಿ ಕಾವ್ಯಾ ಗೌಡ ಜೀವನ ಬೀದಿಗೆ ಬಂದಿದೆ. ಅವರ ಕುಟುಂಬದ ಹೈಡ್ರಾಮಾ ಇಂದು ಎಲ್ಲೆಡೆ ವೈರಲ್ ಆಗುತ್ತಿದೆ. ನಟಿ ಕಾವ್ಯಾ ಗೌಡ ಹಾಗೂ ಪತಿ ಸೋಮಶೇಖರ್ ಮೇಲೆ ಸೋಮಶೇಖರ್ ಸಹೋದರ ನಂದೀಶ್‌ನಿಂದ ಹಲ್ಲೆಯಾಗಿದೆ ಎಂದು ನಿನ್ನೆ ದೂರು ದಾಖಲಿಸಲಾಗಿತ್ತು.
ಇದೀಗ ನಂದೀಶ್ ಪತ್ನಿ ಪ್ರೇಮಾ ತಮ್ಮ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ನಟಿ ಕಾವ್ಯಾ ಗೌಡ ಕಳ್ಳಿ, ಆಸ್ತಿ ಮನೆ ಕಬಳಿಸೋಕೆ ಈ ಡ್ರಾಮಾ ಆಡ್ತಿದ್ದಾಳೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ನಾವು ಇರುವುದು ಮೂರು ಫ್ಲೋರ್ ಮನೆಯಲ್ಲಿ. ಗ್ರೌಂಡ್‌ನಲ್ಲಿ ನಮ್ಮ ಮಾವ, ಮಧ್ಯದಲ್ಲಿ ನಾವು ಹಾಗೂ ಮೇಲೆ ಕಾವ್ಯ ಹಾಗೂ ಸೋಮಶೇಖರ್ ಇದ್ದಾರೆ. ಎಲ್ಲರೂ ಅವರವರ ಮನೆಯಲ್ಲಿ ನೆಮ್ಮದಿಯಾಗಿಯೇ ಇದ್ದೆವು. ಇದೀಗ ಕಾವ್ಯಾ ಹಾಗೂ ಸೋಮಶೇಖರ್‌ಗೆ ಆಸ್ತಿ ಹುಚ್ಚು ಹಿಡಿದಿದೆ. ನಮ್ಮ ಮನೆಯನ್ನೂ ಅವರಿಗೆ ಬಿಟ್ಟು ಕೊಡಬೇಕು ಅನ್ನೋದು ಅವರ ದುರಾಸೆ ಎಂದಿದ್ದಾರೆ.
ಕಾವ್ಯಾ ಹಾಗೂ ಸೋಮಶೇಖರ್ ನಾವಿಲ್ಲದಾಗ ಮನೆಯ ಬೀಗ ಕದ್ದಿದ್ದಾರೆ, ನಾವು ಮನೆಯಲ್ಲಿರದ ಸಮಯ ನೋಡಿ ಬೇಕಾದ ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಆಕೆ ದೊಡ್ಡ ಕಳ್ಳಿ, ಅವಳ ಸಹೋದರಿಯೂ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಸದ್ಯ ಈ ಬಗ್ಗೆ ನಟಿ ಕಾವ್ಯಾ ಗೌಡ ಪ್ರತಿಕ್ರಿಯೆ ನೀಡಿಲ್ಲ.



