ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋ ಮಾತು ಸತ್ಯ. ಜನರು ಒಟ್ಟಿಗೇ ಸೇರಿದರೆ ಏನನ್ನಾದರೂ ಸಾಧಿಸಬಹುದು. ತುಮಕೂರಿನಲ್ಲಿ ಮನೆಯೊಂದರಲ್ಲಿದ್ದ ಕಳ್ಳರನ್ನು ಗ್ರಾಮಸ್ಥರು ಹಿಡಿದುಹಾಕಿದ್ದಾರೆ.
ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಂಧ್ರದ ಚಿತ್ತೂರಿನ ಇಬ್ಬರು ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು.
ಇಡೀ ಗ್ರಾಮದವರು ಮನೆಯ ಬಳಿ ಬಂದು, ಮನೆಗೆ ದಿಗ್ಬಂಧನ ಹಾಕಿದ್ದಾರೆ. ಹೊರಬಂದ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳರ ಬಳಿಯಿದ್ದ ಚಿನ್ನ ಇನ್ನಿತರ ಸಾಮಾಗ್ರಿಗಳನ್ನು ಪೊಲೀಸರು ಮನೆಯವರಿಗೆ ನೀಡಿದ್ದಾರೆ.



