ಕೋಟ್ಯಧಿಪತಿಯಾದ ಮಾದಪ್ಪ, ಮಲೆ ಮಹದೇಶ್ವರನ ಹುಂಡಿಯಲ್ಲಿದ್ದ ಕಾಣಿಕೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಲೆ ಮಹದೇಶ್ವರ ದೇಗುಲದ ಹುಂಡಿ ಎಣಿಕೆ ನಡೆದಿದ್ದು, 1.94 ಕೋಟಿ ರೂ. ಸಂಗ್ರಹವಾಗಿದೆ.

ಇದರೊಂದಿಗೆ ಮಾದಪಪ್ಪ ಮತ್ತೆ ಕೋಟ್ಯಧಿಪತಿಯಾದಂತಾಗಿದೆ. ಅಂದಹಾಗೆ, ಇಷ್ಟು ಮೊತ್ತ ಸಂಗ್ರವಾಗಿದ್ದು ಕೇವಲ 28 ದಿನಗಳಲ್ಲಿ ಎಂಬುದು ಗಮನಾರ್ಹ. ಹುಂಡಿ ಹಣ ಅಷ್ಟೇ ಅಲ್ಲದೆ, 63 ಗ್ರಾಂ ಚಿನ್ನ, ಅರ್ಧ ಕೆಜಿ ಬೆಳ್ಳಿ ಸಂಗ್ರಹವಾಗಿದೆ.

ಮಾದಪ್ಪನಿಗೆ ಭಕ್ತರು ಹರಕೆ ರೂಪದಲ್ಲಿ ಹಣ ಹಾಗೂ ಚಿನ್ನ ಬೆಳ್ಳಿ ಅರ್ಪಿಸುತ್ತಾರೆ. ಮಲೆ ಮಹದೇಶ್ವರ ಪ್ರಾಧಿಕಾರದಿಂದ ಹುಂಡಿ ಎಣಿಕೆ ಕಾರ್ಯ ಸಂಪನ್ನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!