ವಾಸ್ತುಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಈ ವಸ್ತು ಖಾಲಿಯಾಗದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಇವುಗಳು ಖಾಲಿಯಾಗುವುದು ದಾರಿದ್ರ್ಯದ ಸಂಕೇತ ಎಂದು ಹೇಳಲಾಗುತ್ತದೆ.
ಅಕ್ಕಿ ಪ್ರತಿಯೊಂದು ಮನೆಯಲ್ಲಿ ಪ್ರತಿದಿನ ಬಳಸುವ ವಸ್ತು. ಆದ್ದರಿಂದ ಅಕ್ಕಿ ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಿ. ಮೂರು ಹಿಡಿಯಷ್ಟಾದರೂ ಅಕ್ಕಿ ಇರಲೇಬೇಕು.
ಅರಶಿನ ಕೂಡ ಮನೆಯಲ್ಲಿ ಖಾಲಿಯಾಗಬಾರದು. ಇದನ್ನೂ ಕೂಡ ದಾರಿದ್ರ್ಯದ ಸಂಕೇತ ಎಂದು ನಂಬಲಾಗಿದೆ. ಮನೆಯ ಗೃಹಿಣಿ ಈ ವಿಷಯದಲ್ಲಿ ಜಾಗ್ರತೆಯಿಂದಿರಬೇಕು.
ಉಪ್ಪು ಇಲ್ಲದೇ ಯಾವುದೇ ಅಡುಗೆ ಅಪೂರ್ಣ. ಆದ್ದರಿಂದ ಉಪ್ಪು ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಿ. ಅಡುಗೆ ಮನೆಯಲ್ಲಿ ಉಪ್ಪು ಯಾವಾಗಲೂ ಕಾಣುವಂತೆ ಇಡಬೇಕು.