ನಿಮಗೆ ಸುಲಭವಾದ ಸ್ನ್ಯಾಕ್ ರೆಸಿಪಿ ಬೇಕಾ? ಇಲ್ಲಿದೆ ಒಂದು ಸರಳವಾದ ಮಸಾಲಾ ಮಂಡಕ್ಕಿ ರೆಸಿಪಿ. ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗಿರುವ ಪದಾರ್ಥಗಳು:
ಮಂಡಕ್ಕಿ – 2 ಕಪ್
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್ (ಸಣ್ಣಗೆ ಕತ್ತರಿಸಿದ್ದು)
ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ್ದು)
ಟೊಮ್ಯಾಟೋ – 1 (ಸಣ್ಣಗೆ ಕತ್ತರಿದ್ದು)
ಹಸಿಮೆಣಸು – 1 (ಸಣ್ಣಗೆ ಕತ್ತರಿದ್ದು)
ಕರಿಬೇವು – 4-5 ಎಲೆಗಳು
ಕಡ್ಲೆಬೀಜ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕಾಳುಮೆಣಸು ಪುಡಿ – ½ ಟೀ ಸ್ಪೂನ್
ನಿಂಬೆ ರಸ – 1 ಟೇಬಲ್ ಸ್ಪೂನ್
ಕೊಬ್ಬರಿ ತುರಿ – 1 ಟೇಬಲ್ ಸ್ಪೂನ್ (ಐಚ್ಛಿಕ)
ತಯಾರಿಸುವ ವಿಧಾನ:
ಒಂದು ಬೌಲ್ ನಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮ್ಯಾಟೋ, ಹಸಿಮೆಣಸು, ಕರಿಬೇವು ಸೇರಿಸಿ. ಒಟ್ಟಿಗೆ ಕಡ್ಲೆಬೀಜ, ಉಪ್ಪು, ಕಾಳುಮೆಣಸು ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಕೊನೆಗೆ ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ತಕ್ಷಣ ಸರ್ವ್ ಮಾಡಿದ್ರೆ ಸಂಜೆ ಚಾಹ ಅಥವಾ ಕಾಫಿ ಒಟ್ಟಿಗೆ ಒಳ್ಳೆಯ ಕಾಂಬಿನೇಶನ್ ಆಗಿರುತ್ತೆ.
ನಿಮಗೆ ಇನ್ನು ಖಾರ ಖಾರ ಬೇಕು ಅಂತ ಅನ್ನಿಸಿದ್ರೆ ಅದಕ್ಕೆ ಹಸಿರು ಚಟ್ನಿ ಕೂಡ ಸೇರಿಸಬಹುದು. ಮತ್ತೆ ಬೇಕಾದ್ರೆ ಸಣ್ಣ ಸೇವ್ ಕೂಡ ಹಾಕಿ ಟ್ರೈ ಮಾಡಬಹುದು.