ಅಮೆರಿಕದಿಂದ ಮತ್ತೆ ಗಡಿಪಾರು: ಭಾರತಕ್ಕೆ ಬಂದರು 12 ಮಂದಿ ವಲಸಿಗರು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದಿಂದ ಪನಾಮಗೆ ಗಡಿಪಾರು ಮಾಡಲಾಗಿದ್ದ 12 ಭಾರತೀಯರ ಹೊತ್ತ ವಿಮಾನವೊಂದು ಭಾನುವಾರ ಸಂಜೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಅಮೆರಿಕ ಸುಮಾರು 299 ಅಕ್ರಮ ವಲಸಿಗರನ್ನು ಪನಾಮಕ್ಕೆ ಗಡಿಪಾರು ಮಾಡಲಾಗಿದ್ದು, ಅಲ್ಲಿಂದ ವಾಪಸ್ಸಾದ ಭಾರತೀಯರ ಮೊದಲ ಬ್ಯಾಚ್ ಇದಾಗಿದೆ. ಅಕ್ರಮ ವಲಸಿಗರನ್ನು ಪನಾಮ ಮತ್ತು ಕೋಸ್ಟ್ ರಿಕಾಕ್ಕೆ ಗಡಿಪಾರು ಮಾಡಲಾಗುತ್ತಿದೆ. ಬಳಿಕ ಅಲ್ಲಿಂದ ತವರು ರಾಷ್ಟ್ರಗಳಿಗೆ ಕಳುಹಿಸಲಾಗುತ್ತಿದೆ.ಪನಾಮದಿಂದ ಇಸ್ತಾನ್ ಬುಲ್ ಮಾರ್ಗವಾಗಿ ಬಂದ ಟರ್ಕಿಸ್ ಏರ್ ಲೈನ್ಸ್ ವಿಮಾನದ ಮೂಲಕ ಭಾರತದ ಪ್ರಜೆಗಳು ರಾಷ್ಟ್ರ ರಾಜಧಾನಿಗೆ ಬಂದಿಳಿದರು. ಇವರಲ್ಲಿ ನಾಲ್ವರು ಪಂಜಾಬ್, ಮೂವರು ಹರಿಯಾಣ ಹಾಗೂ ಮೂವರು ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.ಒಬ್ಬರು ಯಾವ ರಾಜ್ಯಕ್ಕೆ ಸೇರಿದವರು ಎಂಬುದು ತಿಳಿದುಬಂದಿಲ್ಲ. ಪಂಜಾಬಿನವರನ್ನು ವಿಮಾನದಲ್ಲಿ ಅಮೃತಸರಕ್ಕೆ ಕಳುಹಿಸಲಾಗಿದೆ.

ಈ ಮೊದಲು ಮೊದಲ ಹಂತದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ 205 ಭಾರತೀಯರನ್ನು ಅಮೆರಿಕ ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ವಾಪಾಸ್ ಕರೆತರಲಾಗಿತ್ತು. 2ನೇ ಹಂತದ ಗಡಿಪಾರಿನಲ್ಲಿ 119 ಮಂದಿ ಹಾಗೂ 3ನೇ ಹಂತದಲ್ಲಿ 112 ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕ ಸರ್ಕಾರ ಗಡಿಪಾರು ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!