ಕಾಫಿ ಜೊತೆಗೊಂದು ಬ್ರೆಡ್, ಟೀ ಜೊತೆಗೊಂದು ಬನ್! ಹೀಗೆ ವಾರಕ್ಕೆ ಎರಡು ಮೂರು ದಿನವಾದ್ರೂ ಬಿಳಿಯ ಬ್ರೆಡ್, ಬನ್ ಸೇವನೆ ಮಾಡ್ತೀರಾ? ಅದಕ್ಕೂ ಮೊದಲು ಇದನ್ನು ಓದಿ..
ಆಗಾಗ ವೈಟ್ ಬ್ರೆಡ್ ತಿನ್ನೋದ್ರಿಂದ ನಿಮ್ಮ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ತೂಕ ಏರಿಕೆ, ಬೊಜ್ಜು, ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆಗಳು ನಿಮ್ಮನ್ನು ಬಾಧಿಸುತ್ತವೆ.
ಬ್ರೆಡ್‌ನಲ್ಲಿ ಹೆಚ್ಚು ಕ್ಯಾಲರಿ ಇರುತ್ತದೆ. ಆದರೆ ಯಾವುದೇ ನ್ಯೂಟ್ರಿಯಂಟ್ಸ್ ಅಥವಾ ಫೈಬರ್ ಇರುವುದಿಲ್ಲ. ಇದರಿಂದಾಗಿ ಅತಿಯಾಗಿ ಮೈದಾ ಬ್ರೆಡ್ ತಿನ್ನುವುದು ಉತ್ತಮವಲ್ಲ.
ಜೀರ್ಣ ಆಗೋದಿಲ್ಲ. ಬಿಳಿ ಬ್ರೆಡ್‌ನಲ್ಲಿ ಫೈಬರ್ ಇಲ್ಲದ ಕಾರಣ ಜೀರ್ಣ ಆಗೋಕೆ ಕಷ್ಟವಾಗುತ್ತದೆ. ಜತೆಗೆ ಮಲಬದ್ಧತೆ ಆರಂಭವಾಗುತ್ತದೆ. ಇದು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಬ್ರೆಡ್‌ನಲ್ಲಿ ಮೈದಾ, ಸಕ್ಕರೆ, ಪಾಮ್ ಆಯಿಲ್, ಉಪ್ಪು ಇರುತ್ತದೆ. ಇನ್ನು ಅತ್ಯಂತ ಕೆಟ್ಟ ಜಾಗಗಳಲ್ಲಿ ತಯಾರು ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.



