HEALTH | ಕೂಲ್‌ಡ್ರಿಂಕ್ಸ್‌ ಎಲ್ಲಾ ಬಿಟ್ಟುಬಿಡಿ! ದೇಹ ತಂಪಾಗಿಟ್ಟುಕೊಳ್ಳೋಕೆ ರಾಗಿ ಅಂಬಲಿ ಕುಡಿಯಿರಿ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ದೇಹವನ್ನು ತಂಪಾಗಿಸಲು ಅನೇಕ ಜನರು ಕಾರ್ಬೊನೇಟೆಡ್ ಕೂಲ್ ಡ್ರಿಂಕ್ಸ್ ಕುಡಿಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ. ಇದರ ಬದಲು ಮನೆಯಲ್ಲಿಯೇ ರಾಗಿ ಅಂಬಲಿ ಮಾಡಿಕೊಳ್ಳಿ.. ಅದರ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ರಾಗಿ ಹಿಟ್ಟು – 2 ಟೀಸ್ಪೂನ್
ಬಾಂಬೆ ರವಾ – 2 ಟೀಸ್ಪೂನ್
ಉಪ್ಪು – ರುಚಿಗೆ ಬೇಕಾಗುವಷ್ಟು
ಮೊಸರು – 1/4 ರಿಂದ 1/2 ಕಪ್

ಮಾಡುವ ವಿಧಾನ

ಮೊದಲು ರಾಗಿ ಹಿಟ್ಟನ್ನು ಸಣ್ಣ ಮಿಕ್ಸಿಂಗ್​ ಬೌಲ್​ನಲ್ಲಿ ತೆಗೆದುಕೊಳ್ಳಿ. ಬಳಿಕ ಅರ್ಧ ಕಪ್ ನೀರನ್ನು ಅದರೊಳಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ನಾವು ಅದನ್ನು ತಯಾರಿಸುವ ಮೊದಲು ಅದನ್ನು ಹಿಂದಿನ ದಿನ ಸಂಜೆ ಅಥವಾ ರಾತ್ರಿಯಲ್ಲಿ ಹಿಟ್ಟನ್ನು ನೆನೆಸಿ ಇಡಬೇಕು.

ಇದಾನಂತರ ಇನ್ನೊಂದು ಪಾತ್ರೆಯಲ್ಲಿ ನೀರನ್ನು ಸೋಸಿಕೊಳ್ಳಿ. ರಾಗಿ ಹಿಟ್ಟು ನೆನೆಸಲು ಬಳಸಿದ ನೀರನ್ನು ಬಿಸಾಡದೆ ಮರುದಿನವೂ ಅಂಬಲಿ ಬೇಯಿಸಲು ಇದೇ ನೀರನ್ನು ಬಳಸಬೇಕು. ಇದು ಹೆಚ್ಚು ರುಚಿ ಹಾಗೂ ಪೋಷಕಾಂಶಗಳಿಂದ ಕೂಡಿರುತ್ತದೆ.

ಈಗ ಒಲೆಯ ಮೇಲೆ ಪಾತ್ರೆ ಇಟ್ಟು 2 ರಿಂದ 3 ಕಪ್ ನೀರು (ಸುಮಾರು 650 ಮಿಲಿ) ಸುರಿಯಿರಿ ಹಾಗೂ ಒಲೆಯನ್ನು ಕಡಿಮೆ ಉರಿಯಲ್ಲಿ ಇರಿಸಿ ಸರಿಯಾಗಿ ಕುದಿಸಬೇಕಾಗುತ್ತದೆ. ನೀರು ಸ್ವಲ್ಪ ಬಿಸಿಯಾದ ನಂತರ ಅದರಲ್ಲಿ ನೆನೆಸಿದ ರಾಗಿ ಹಿಟ್ಟು ಹಾಗೂ ಮೊದಲು ಸೋಸಿದ ನೀರನ್ನು ಮತ್ತೆ ಮಿಶ್ರಣ ಮಾಡಬೇಕು.

ನೀರಿಗೆ ಹಿಟ್ಟನ್ನು ಸೇರಿಸಿದ ನಂತರ, ಒಂದು ಚಮಚದಿಂದ ಚೆನ್ನಾಗಿ ಮಿಶ್ರಣ ಮಾಡಿ. ಇಲ್ಲದಿದ್ದರೆ, ಹಿಟ್ಟು ಗಂಟಾಗುತ್ತದೆ ಎಂದು ನೀವು ನೆನಪಿಟ್ಟುಕೊಳ್ಳಬೇಕು.

ಬಳಿಕ ಬಾಂಬೆ ರವಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ 4 ರಿಂದ 5 ನಿಮಿಷ ಬೇಯಿಸಬೇಕಾಗುತ್ತದೆ.

ಬಳಿಕ ಬೇಕಾದಷ್ಟು ಉಪ್ಪು ಹಾಕಿ ಮತ್ತೆ 5 ನಿಮಿಷ ಬೇಯಿಸಿದರೆ ಸಾಕು ರಾಗಿ ಅಂಬಲಿ ಅಥವಾ ಗಂಜಿ ರೆಡಿಯಾಗುತ್ತದೆ. ಬಳಿಕ ಒಲೆ ಆಫ್ ಮಾಡಿ ಮತ್ತು ಸ್ವಲ್ಪ ತಣ್ಣಗಾಗಲು ಬಿಡಿ.

ಇದಕ್ಕೂ ಮೊದಲು ಒಂದು ಚಿಕ್ಕ ಬಟ್ಟಲಿನಲ್ಲಿ ಮೊಸರನ್ನು ತೆಗೆದುಕೊಂಡು ಅರ್ಧ ಕಪ್ ನೀರು ಸೇರಿಸಿ ದಪ್ಪ ಮಜ್ಜಿಗೆ ರೆಡಿ ಮಾಡಿ.

ಈಗ ಸ್ವಲ್ಪ ತಣ್ಣಗಾದ ರಾಗಿ ಅಂಬಲಿಗೆ ಮಜ್ಜಿಗೆ ಸೇರಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಈ ಹಂತದಲ್ಲಿ ಉಪ್ಪು ಸಾಕಾಗದಿದ್ದರೆ ಮತ್ತಷ್ಟು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ.

ಬಳಿಕ ಅದನ್ನು ಗ್ಲಾಸ್​ನಲ್ಲಿ ತೆಗೆದುಕೊಂಡು ಸ್ವಲ್ಪ ತೆಳ್ಳಗೆ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸು ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇದೀಗ ಅಷ್ಟೇ ಟೇಸ್ಟಿ ಹಾಗೂ ಆರೋಗ್ಯಕರವಾದ ರಾಗಿ ಅಂಬಲಿ ಸವಿಯಲು ಸಿದ್ಧವಾಗಿದೆ.

ಹುಳಿಬೇಕೆಂದರೆ ಸ್ವಲ್ಪ ನಿಂಬೆರಸ ಹಿಂಡಿ ಸೇವಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!