ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಯುವ್ಯ ಕಾಂಗೋದ ಈಕ್ವೆಟರ್ ಪ್ರಾಂತ್ಯದಲ್ಲಿ ನಿಗೂಢ ರೋಗವೊಂದು ಪತ್ತೆಯಾಗಿದ್ದು, ಇದುವರೆಗೂ 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಸಾವಿಗೀಡಾದ 50 ಮಂದಿಯಲ್ಲಿ 25 ಜನ ಅನಾರೋಗ್ಯಕ್ಕೆ ತುತ್ತಾದ ಕೆಲವೇ ಗಂಟೆಗಳಲ್ಲಿ ಸಾವಿಗೀಡಾಗಿದ್ದಾರೆ. ರೋಗ ಪತ್ತೆಯಾದ ಜನರಲ್ಲಿ ಅಳುವುದು ಪ್ರಮುಖ ಲಕ್ಷಣವಾಗಿದೆ ಎಂದು ವರದಿಯಾಗಿದೆ. ಈ ಸಮಸ್ಯೆಗೆ ಅಳುವ ರೋಗ ಎಂದು ಕರೆಯಲಾಗುತ್ತಿದೆ.
ಈಕ್ವೆಟರ್ ಪ್ರಾಂತ್ಯದ ಹಳ್ಳಿಗಳಲ್ಲಿ ಈ ರೋಗ ಪತ್ತೆಯಾಗಿದ್ದು, ಆರೋಗ್ಯ ಅಧಿಕಾರಿಗಳು 419 ಪ್ರಕರಣಗಳು ಮತ್ತು 53 ಸಾವುಗಳನ್ನು ವರದಿ ಮಾಡಿದ್ದಾರೆ. ಈ ರೋಗಗಳು ಹೇಗೆ ಹರಡುತ್ತಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಿನ್ಶಾಸಾದಿಂದ 640 ಕಿಲೋಮೀಟರ್ ದೂರದಲ್ಲಿರುವ ಈಕ್ವೆಟರ್ ಪ್ರಾಂತ್ಯದ ಎರಡು ದೂರದ ಹಳ್ಳಿಗಳಲ್ಲಿ ರೋಗಗಳು ಕಾಣಿಸಿಕೊಂಡಿದೆ. ಈ ಹಳ್ಳಿಗಳ ನಡುವಿನ ಸಂಪರ್ಕದ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾಗಿಲ್ಲ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನೂ ಸಹ ಬಿಡುಗಡೆ ಮಾಡಿಲ್ಲ.
ಅಳುವ ರೋಗದಿಂದ ಬಹಳಷ್ಟು ಸಾವುಗಳು ಸಂಭವಿಸಿದ್ದು, ನಾವು ತನಿಖೆ ಮುಂದುವರಿಸುತ್ತಿದ್ದೇವೆ. ಅಲ್ಲದೇ ಹಂತ ಹಂತವಾಗಿ ಜನರಲ್ಲಿ ಮಲೇರಿಯಾದ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸುಮಾರು 80% ರೋಗಿಗಳಲ್ಲಿ ಜ್ವರ, ಶೀತ, ಮೈ-ಕೈ ನೋವು ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಂಡಿವೆ. 59 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ತೀವ್ರ ಬಾಯಾರಿಕೆ, ಮಕ್ಕಳಲ್ಲಿ ನಿರಂತರ ಅಳುವ ಲಕ್ಷಣಗಳು ಪತ್ತೆಯಾಗಿವೆ.