28 ವಿವಿಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಕಿಂಗ್​​ಪಿನ್ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಕಿಂಗ್ ಪಿನ್​​ನನ್ನು ಕಲಬುರಗಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ದೇಹಲಿ ಮೂಲದ ರಾಜೀವ ಸಿಂಗ್ ಆರೋರಾ ಬಂಧಿತ ಆರೋಪಿ. ದೆಹಲಿಯ ರಾಮಪಾರ್ಕ್ ಅಪಾರ್ಟ್ಮೆಂಟ್ ದ್ವಾರಕ್ ಮೋಡ್​ನಲ್ಲಿ ಬಂಧಿಸಲಾಗಿದೆ.

ನಕಲಿ ವಿಶ್ವವಿದ್ಯಾಲಯ ಸೃಷ್ಟಿ ಮಾಡಿ ಅದರ ಹೆಸರಲ್ಲಿ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ. ಕರ್ನಾಟಕದ ಬೆಂಗಳೂರು, ಮೈಸೂರು, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರಿ ಮಾಡುತ್ತಿದ್ದ.

ಕಳೆದ ಏಳೆಂಟು ವರ್ಷಗಳಿಂದ ಬಂಧಿತ ಆರೋಪಿ ರಾಜೀವ ಸಿಂಗ್ ಆರೋರಾ ನಕಲಿ ಅಂಕ ಪಟ್ಟಿ ತಯಾರಿ ಮಾಡುತ್ತಿದ್ದನು.

ಬರೋಬ್ಬರಿ 522 ನಕಲಿ ಅಂಕಪಟ್ಟಿಗಳು, 1626 ಖಾಲಿ ಅಂಕಪಟ್ಟಿಗಳು, 36 ಮೊಬೈಲ್, 2 ಲ್ಯಾಪ್‌ ಟಾಪ್, 1 ಪ್ರಿಂಟರ್​​, ವಿವಿಧ ವಿಶ್ವವಿದ್ಯಾಲಯಗಳ 122 ನಕಲಿ ಸೀಲ್​​ಗಳು, ಎಟಿಎಂ ಕಾರ್ಡ್ ಮತ್ತು ಆರೋಪಿಯ 123 ನಕಲಿ ಐಡಿಗಳು, ಆರೋಪಿಯ 85 ಬ್ಯಾಂಕ್ ಅಕೌಂಟ್​​​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!