ಆತನಿಂದ ಬದುಕು ಹಾಳಾಯ್ತು, ನನ್ನ ಸಾವಿಗೆ ಅವನೇ ಕಾರಣ: ರಾಜಮೌಳಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡ ಗೆಳೆಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್ ಸ್ಟಾರ್ ಡೈರೆಕ್ಟರ್ ಎಸ್‌.ಎಸ್​​ ರಾಜಮೌಳಿ ವಿರುದ್ಧ ಆಪ್ತ ಸ್ನೇಹಿತನೇ ಗಂಭೀರ ಆರೋಪ ಮಾಡಿದ್ದು, ನನ್ನ ಸಾವಿಗೆ ರಾಜಮೌಳಿ ಕಾರಣ ಎಂದು ಆತ್ಮಹತ್ಯೆಗೆ ಶರಣಾಗಲಿದ್ದೇನೆ .

ರಾಜಮೌಳಿ ಆಪ್ತಮಿತ್ರ ಶ್ರೀನಿವಾಸ್ ರಾವ್ ವಿಡಿಯೋ ಮಾಡಿದ್ದಾರೆ. ಅದೀಗ ಹೊರಗಡೆ ಬಂದು ವೈರಲ್ ಆಗ್ತಿದೆ. ಜೂನಿಯರ್ ಎನ್‌ಟಿಅರ್ ನಟನೆಯ ‘ಯಮದೊಂಗ’ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದರು ಶ್ರೀನಿವಾಸ್ ರಾವ್.

‘ನಿರ್ದೇಶಕ ರಾಜಮೌಳಿಯಿಂದ ತನ್ನ ಬದುಕು ಹಾಳಾಯ್ತು.. ಆತನೇ ನನ್ನ ಸಾವಿಗೆ ಕಾರಣ’ ಎಂದು ಆರೋಪ ಮಾಡಿರುವ ಶ್ರೀನಿವಾಸ್ ರಾವ್ ‘ಒಬ್ಬ ಯುವತಿಯ ವಿಚಾರಕ್ಕೆ ನನಗೂ ರಾಜಮೌಳಿಗೂ ನಡುವೆ ಮನಸ್ತಾಪ ಆಗಿತ್ತು ಎಂದು ಹೇಳಿದ್ದಾರೆ.

55 ವರ್ಷದ ಶ್ರೀನಿವಾಸ್ ರಾವ್ ಏಕಾಂಗಿಯಾಗಿ ಉಳಿಯಲು ಕಾರಣವೇ ರಾಜಮೌಳಿ ಎನ್ನುವ ಆರೋಪ ಇದೀಗ ಬಂದಿದೆ. ಶ್ರೀನಿವಾಸ್ ರಾವ್ ಆರೋಪಗಳ ಕುರಿತು ಪೊಲೀಸ್ ತನಿಖೆಯೆ ಸಾಧ್ಯತೆ ದಟ್ಟವಾಗಿದೆ.

ಆತ್ಮಹತ್ಯೆಗೆ ಶರಣಾಗಿದ್ದ ರಾಜಮೌಳಿ ಆಪ್ತಮಿತ್ರ ಶ್ರೀನಿವಾಸ್ ರಾವ್ ಅವರು ಸಾವಿಗೂ ಮುನ್ನ ವಿಡಿಯೋ ಮಾಡಿರುವುದಾಗಿ ರಾಜಮೌಳಿ ವಿರುದ್ದ ಆರೋಪ ಹೊರಿಸಿದ್ದಾರೆ.

ಆದರೆ, ಅವರು ಆತ್ಮಹತ್ಯೆಗೆ ಶರಣಾಗಿದ್ದಾರೋ ಇಲ್ಲವೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಜೊತೆಗೆ ಡೆತ್ ನೋಟ್ ಕೂಡ ಸಿಕ್ಕಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ. ಇದೀಗ ಅವರು ಕೊನೆಯದಾಗಿ ಮಾಡಿರುವ ವಿಡಿಯೋ ಎನ್ನುವುದು ಬಹಿರಂಗವಾಗಿದೆ. ಇದರಲ್ಲಿ, ರಾಜಮೌಳಿ ಆಪ್ತ ಸ್ನೇಹಿತ ಶ್ರೀನಿವಾಸ್ ರಾವ್ ಅವರು ತಮ್ಮ ಮಿತ್ರ ರಾಜಮೌಳಿ ತಮಗೆ ಹುಡುಗಿ ವಿಷಯದಲ್ಲಿ ಹೇಗೆಲ್ಲಾ ಅನ್ಯಾ ಮಾಡಿದ್ದಾರೆ ಎಂದು ವಿವರಿಸಿದ್ದಾರೆ. ಕೀರವಾಣಿ ಸೇರಿದಂತೆ ಹಲವರ ಹೆಸರು ಈ ವಿಡಿಯೋದ ಆಡಿಯೋದಲ್ಲಿ ಹೇಳಿದ್ದಾರೆ.

ಈ ವಿಡಿಯೋ ಈಗತಾನೇ ಬಹಿರಂಗ ಆಗಿದ್ದು ಇದೀಗ ಪೋಲೀಸರು ತನಿಖೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!