ಪ್ರಾಣಿಗಳ ರಕ್ಷಣೆ, ಅತ್ಯುತ್ತಮ ಆರೈಕೆ: ಅನಂತ್ ಅಂಬಾನಿಯ `ವಂತಾರ’ಗೆ ರಾಷ್ಟ್ರೀಯ ಪ್ರಾಣಿ ಮಿತ್ರ ಪ್ರಶಸ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ `ವಂತಾರ’ ಸಂಸ್ಥೆಗೆ ಕೇಂದ್ರ ಸರ್ಕಾರವು `ಕಾರ್ಪೊರೇಟ್’ ವಿಭಾಗದ ಅಡಿಯಲ್ಲಿ ಪ್ರಾಣಿ ರಕ್ಷಣೆಗೆ ದೇಶದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ `ಪ್ರಾಣಿ ಮಿತ್ರ’ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ವಂತಾರ ಅಡಿಯಲ್ಲಿ ಆನೆಗಳ ರಕ್ಷಣೆ, ಚಿಕಿತ್ಸೆ ಮತ್ತು ಜೀವಿತಾವಧಿಯ ಆರೈಕೆಗೆ ಮೀಸಲಾಗಿರುವ ರಾಧೆ ಕೃಷ್ಣ ಟೆಂಪಲ್ ಎಲೆಫೆಂಟ್ ವೆಲ್ ಫೇರ್ ಟ್ರಸ್ಟ್ನ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ವಂತಾರದಲ್ಲಿ 240ಕ್ಕೂ ಹೆಚ್ಚು ಆನೆಗಳಿಗೆ ಸರಪಳಿ-ಮುಕ್ತ, ಸುರಕ್ಷಿತ ಮತ್ತು ಸಮೃದ್ಧ ವಾತಾವರಣವನ್ನು ಒದಗಿಸುತ್ತದೆ. ಇದರಲ್ಲಿ ಸರ್ಕಸ್‌ಗಳಿಂದ 30 ಆನೆಗಳು, ಮರ ಕಡಿಯುವ ಉದ್ಯಮದಿಂದ 100ಕ್ಕೂ ಹೆಚ್ಚು ಆನೆಗಳು, ಸವಾರಿ ಹಾಗೂ ಬೀದಿ ಭಿಕ್ಷಾಟನೆಯಿಂದ ರಕ್ಷಿಸಲಾದ ಇತರ ಆನೆಗಳೂ ಸೇರಿವೆ. ವಂತಾರದಲ್ಲಿ ಅವುಗಳಿಗೆ ವಿಶ್ವ ದರ್ಜೆಯ ಪಶುವೈದ್ಯಕೀಯ ಚಿಕಿತ್ಸೆ ಮತ್ತು ಸಹಾನುಭೂತಿಯ ಆರೈಕೆ ಸಿಗುತ್ತದೆ.

998 ಎಕರೆಗಳಷ್ಟು ವಿಶೇಷವಾಗಿ ರೂಪಿಸಲಾದ ಕಾಡಿನಲ್ಲಿ ಮುಕ್ತವಾಗಿ ಸುತ್ತಾಡಲು, ಸಾಮಾಜಿಕವಾಗಿ ಮತ್ತು ನೈಸರ್ಗಿಕ ನಡವಳಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಕೇಂದ್ರದಲ್ಲಿ ಆನೆಗಳಿಗೆ ಅನುವು ಮಾಡಿಕೊಡುತ್ತದೆ. ಅಲ್ಲಿ ಅವು ಮೇವು ಹುಡುಕಿಕೊಳ್ಳಬಹುದು, ಮಣ್ಣು ಮತ್ತು ಧೂಳಿನ ಸ್ನಾನ ಮಾಡಬಹುದು ಹಾಗೂ ನೈಸರ್ಗಿಕ ಕೊಳಗಳಲ್ಲಿಯೂ ಸ್ನಾನ ಮಾಡಬಹುದು.

ದೆಹಲಿಯ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವಂತಾರದ ಸಿಇಒ ವಿವಾನ್ ಕರಣಿ ಅವರು ಈ ಗೌರವವನ್ನು ಸ್ವೀಕರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!