ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಕಪ್ ಮಹಿಳೆಯರ ಅಂದ ಹೆಚ್ಚಿಸೋ ಬದಲು ದೇಹಕ್ಕೆ ರೋಗ ತರುವ ಕೆಲಸ ಮಾಡುತ್ತಿದೆಯೇ?
ಹೌದು ಎನ್ನುತ್ತಿದೆ ಕೆಲವು ಸಂಶೋಧನಾ ವರದಿಗಳು. ಮೇಕಪ್ ಗೆ ಬಳಸುವ ವಿವಿಧ ಉತ್ಪನ್ನಗಳು ಈಗ ಹಾನಿಕಾರಕ ರಾಸಾಯನಿಕ ಹೊಂದಿರುವುದು ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ಇವುಗಳ ನಿಷೇಧಕ್ಕೆ ಆರೋಗ್ಯ ಇಲಾಖೆ ಸದ್ದಿಲ್ಲದೆ ಸಿದ್ಧತೆ ನಡೆಸಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾರುಕಟ್ಟೆಯಲ್ಲಿರುವ ಕೆಲವು ಟ್ಯಾಟೂ, ಲಿಪ್ ಸ್ಟಿಕ್, ಪೌಡರ್, ಐ ಲೈನರ್, ಕಾಜಲ್ ಗಳಿಂದ ಎಚ್ಐವಿ, ಚರ್ಮ ರೋಗ, ಕ್ಯಾನ್ಸರ್ ಮೊದಲಾದ ಕಾಯಿಲೆ ಬರುವ ಸಾಧ್ಯತೆ ಇದೆ ಎಂಬ ವರದಿ ಇದೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು. ಈ ಉತ್ಪನ್ನಗಳ ಪಟ್ಟಿಯಲ್ಲಿ ಈಗ ಮೆಹಂದಿ ಕೂಡಾ ಸೇರಿಕೊಂಡಿದೆ!
ಕೆಲವು ಕಳಪೆ ಗುಣಮಟ್ಟದ ಮೆಹಂದಿಯಲ್ಲಿರುವ ಕೆಲವು ಅಪಾಯಕಾರಿ ರಾಸಾಯನಿಕಗಳು ಚರ್ಮದ ಮೇಲೆ ಅಲರ್ಜಿ, ಕೆರೆತದಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಇವುಗಳ ಮೇಲೂ ಹದ್ದಿನಕಣ್ಣಿರಿಸಿದೆ.
ಗೋಬಿಮಂಚೂರಿ, ಕಾಟನ್ ಕ್ಯಾಂಡಿಗಳನ್ನ ಕಲರ್ ಲೆಸ್ ಮಾಡಿ ಜನರ ಆರೋಗ್ಯ ಕಾಪಾಡಿದ್ದ ಆರೋಗ್ಯ ಇಲಾಖೆ ಈಗ ತನ್ನ ಕೆಲಸವನ್ನ ಮುಂದುವರೆಸಿದ್ದು, ಇಡ್ಲಿ ಬೇಯಿಸುವ ವೇಳೆ ಬಳಸುವ ಪ್ಲಾಸ್ಟಿಕ್ ಗೂ ಕಡಿವಾಣ ಹಾಕಲಿದೆ.