ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ತಿರುಪತಿ ದೇವಸ್ಥಾನಗಳ ಎಸ್‌ವಿ ಅನ್ನಪ್ರಸಾದ ಟ್ರಸ್ಟ್ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಉಚಿತ, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸಲು ಒಂದು ದಿನದ ದಾನ ಯೋಜನೆಯನ್ನು ಪರಿಚಯಿಸಿದೆ.
ದೇವಾಲಯದಲ್ಲಿ ಭಕ್ತರಿಗೆ ಅನ್ನದಾನ ಮಾಡಲು ಬಯಸುವ ದಾನಿಗಳು ಇನ್ನು ಮುಂದೆ ವೈಯಕ್ತಿಕವಾಗಿ ಅನ್ನಪ್ರಸಾದವನ್ನು ಬಡಿಸಬಹುದು.
ಟಿಟಿಡಿ ಶುಕ್ರವಾರ ತನ್ನ ಹೇಳಿಕೆಯಲ್ಲಿ, ವೆಂಗಮಾಂಬ ಅನ್ನಪ್ರಸಾದ ಭವನದಲ್ಲಿ ಪೂರ್ಣ ದಿನದ ಅನ್ನಪ್ರಸಾದ ವಿತರಣೆಯನ್ನು ಪ್ರಾಯೋಜಿಸಲು ದಾನಿಗಳು ₹44 ಲಕ್ಷ ದೇಣಿಗೆ ನೀಡಬಹುದು ಎಂದು ಘೋಷಿಸಿದೆ. ಜತೆಗೆ ದಾನಿಗಳು ವೈಯಕ್ತಿಕವಾಗಿ ಊಟ ಬಡಿಸುವ ಅವಕಾಶವನ್ನು ಸಹ ಹೊಂದಿರುತ್ತಾರೆ ಮತ್ತು ಅವರ ಹೆಸರುಗಳನ್ನು ಪ್ರದರ್ಶಿಸಲಾಗುತ್ತದೆ ಎಂದೂ ತಿಳಿಸಿದೆ.
ಒಂದು ದಿನದ ಉಪಹಾರಕ್ಕೆ ₹10 ಲಕ್ಷ ರೂ. ಮಧ್ಯಾಹ್ನದ ಊಟಕ್ಕೆ ₹17 ಲಕ್ಷ ರೂ. ಹಾಗೂ ರಾತ್ರಿ ಊಟಕ್ಕೆ ₹17 ಲಕ್ಷ ರೂ. ನಿಗದಿ ಮಾಡಲಾಗಿದೆ. ಇಡೀ ದಿನದ ಅನ್ನದಾನ ಬಯಸುವ ಭಕ್ತರು 44 ಲಕ್ಷ ರೂ. ದೇಣಿಗೆ ನೀಡಬಹುದಾಗಿದೆ.