ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದನೇ ತರಗತಿ ದಾಖಲಾತಿಗೆ 6 ವರ್ಷ ವಯಸ್ಸು ಕಡ್ಡಾಯ ನಿಯಮ ಸಡಿಲಿಕೆ ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಇದರಲ್ಲಿ ನಾನೇನು ಮಾಡಲು ಸಾಧ್ಯವಿಲ್ಲ. ಈಗಾಗಲೇ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಕೂಡಾ ಅವರ ಅರ್ಜಿ ವಜಾ ಮಾಡಿದೆ. ನ್ಯಾಯಾಲಯ ಏನೇ ಆದೇಶ ಕೊಟ್ಟರೂ ಅದನ್ನು ಪಾಲನೆ ಮಾಡುತ್ತೇವೆಂದು ಹೇಳಿದರು.
6 ವರ್ಷದ ನಿಯಮದಿಂದ ಬೇಸವಾಗುತ್ತದೆ ನಿಜ. ಆದರೆ ನಿಯಮದ ಪ್ರಕಾರ ನಾವು ನಡೆಯಬೇಕು. 1 ತಿಂಗಳು, 2 ತಿಂಗಳು ಕಡಿಮೆ ಇರುವವರಿಗೆ ಕೊಟ್ಟರೆ ಮತ್ತೊಬ್ಬರು ಕೇಳುತ್ತಾರೆ. ಇದೆಲ್ಲವೂ ಬಹಳ ಚರ್ಚೆ ಆಗುವ ವಿಷಯ. ಎಷ್ಟೋ ಪೋಷಕರು 7 ದಿನ ಕಡಿಮೆ ಅಂತಿದ್ದಾರೆ. ಆದರೆ, ಅದು ಕಾನೂನಿನಲ್ಲಿ ಇಲ್ಲ. ನಾವು ಅದನ್ನು ಪರಿಗಣಿಸಲು ಸಾಧ್ಯವಿಲ್ಲ. ಈಗ ಈ ವಿಷಯ ಕೋರ್ಟ್ ನಲ್ಲಿದೆ. ಕೋರ್ಟ್ ನಲ್ಲಿ ನಿರ್ಧಾರ ಬಂದರೆ ನಾವು ತೀರ್ಮಾನ ಮಾಡಬಹುದು. ಕೋರ್ಟ್ ಆದೇಶದಂತೆ ನಡೆದುಕೊಳ್ಳುತ್ತೇವೆಂದರು.