HEALTH| ಬೆಳಗ್ಗೆ ಹೊಟ್ಟೆ ಖಾಲಿ ಮಾಡೋಕೆ ಕಷ್ಟ ಆಗ್ತಿದ್ಯಾ? ಮಲಬದ್ಧತೆ ಇದ್ರೆ ಈ ಆಹಾರ ಸೇವಿಸಲೇಬೇಡಿ!

ಬೆಳಗ್ಗೆ ಹೊಟ್ಟೆ ಖಾಲಿ ಮಾಡೋಕೆ ನಿಮಗೆ ಕಷ್ಟ ಆಗ್ತಿದ್ಯಾ? ಅದಕ್ಕೆ ಕಾರಣ ಏನು ಅಂತ ನಿಮಗೆ ಗೊತ್ತಿದೆಯಾ ? ಕೆಲವೊಮ್ಮೆ ಬದಲಾಗುವ ನಮ್ಮ ಆಹಾರ ಪದ್ದತಿಯಿಂದ ಕಾನ್ಸ್ಟಿಪೇಶನ್ ಉಂಟಾಗುತ್ತೆ.

ಇಲ್ಲಿ ಮುಖ್ಯವಾಗಿ ಯಾವೆಲ್ಲ ಆಹಾರಗಳು ನಮಗೆ ಕಾನ್ಸ್ಟಿಪೇಶನ್ ಕೊಡುತ್ತದೆ ಅನ್ನುವುದನ್ನು ತಿಳಿದುಕೊಳ್ಳೋಣ .

ಆಲ್ಕೋಹಾಲ್
ಮದ್ಯಪಾನ ಮಾಡುವವರಲ್ಲಿ ಮಲಬದ್ಧತೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತೆ. ಯಾಕೆ ಅಂದರೆ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಕುಡಿಯುವುದರಿಂದ ದೇಹದಲ್ಲಿರುವ ನೀರು ಮೂತ್ರದ ಮೂಲಕ ವಿಸರ್ಜನೆ ಯಾಗುವುದರಿಂದ ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತೆ.

ಗ್ಲುಟನ್‌ ಫ್ರೀ ಆಹಾರ
ಆಹಾರದಲ್ಲಿ ಕೆಲವೊಮ್ಮೆ ನಾರಿನ ಅಂಶದ ಕೊರತೆಯಿಂದ ಕಾನ್ಸ್ಟಿಪೇಶನ್ ಉಂಟಾಗಬಹುದು. ಆಹಾರದಲ್ಲಿ ಗ್ಲುಟನ್‌ ಅಂಶ ಕಡಿಮೆಯಾದಾಗ ಬ್ಲೋಟಿಂಗ್, ಹೊಟ್ಟೆ ಉಬ್ಬುವಂತಹ ಸಮಸ್ಯೆ ಕಾಣಬಹುದು.

ಗ್ಲುಟನ್ ಅಲರ್ಜಿ ಅಥವಾ ಸೆಲಿಯಾಕ್ ಕಾಯಿಲೆ ಇದ್ದರೆ ನೀವೂ ನಾರಿನಂಶದ ಆಹಾರ ಸೇವಿಸಿದರೆ ಕಾನ್ಸ್ಟಿಪೇಶನ್ ಇನ್ನಷ್ಟು ಹೆಚ್ಚಾಗುತ್ತದೆ.

ಸಂಸ್ಕರಿಸಿದ ಧಾನ್ಯಗಳು
ಸಂಸ್ಕರಿಸಿದ ಧಾನ್ಯಗಳಿಂದ ತಯಾರಿಸಿದ ಬ್ರೆಡ್, ವೈಟ್ ರೈಸ್, ವೈಟ್ ಪಾಸ್ತಾ, ಇಂತಹ ಆಹಾರಗಳಲ್ಲಿ ಕಡಿಮೆ ಫೈಬರ್ ಇರುವುದರಿಂದ ಮಲಬದ್ಧತೆಗೆ ಕಾರಣವಾಗಬಹುದು.

ಒಂದು ವೇಳೆ ನೀವು ನಿಮ್ಮ ಫೈಬರ್ ಸೇವನೆಯನ್ನು ಹೆಚ್ಚಿಸ ಬೇಕೆಂದರೆ, ನೀರು ಕುಡಿಯುವುದನ್ನು ಹೆಚ್ಚಿಗೆ ಮಾಡಬೇಕು. ಯಾಕೆಂದರೆ ಫೈಬರ್ ಅಂಶ ದೇಹದಲ್ಲಿ ಜೀರ್ಣವಾಗಲು ಹೆಚ್ಚಿನ ನೀರು ಕೇಳುತ್ತದೆ. ಸಾಕಷ್ಟು ನೀರು ಕುಡಿಯದಿದ್ದರೆ ಕಾನ್ಸ್ಟಿಪೇಶನ್ ಹೆಚ್ಚಾಗುತ್ತದೆ.

ಡೈರಿ ಉತ್ಪನ್ನಗಳು
ಡೈರಿ ಉತ್ಪನ್ನ ಮಲಬದ್ಧತೆಗೆ ಮತ್ತೊಂದು ಸಾಮಾನ್ಯ ಕಾರಣ. ಕೆಲವು ವರದಿಗಳ ಪ್ರಕಾರ ಹಸುವಿನ ಹಾಲಿನಲ್ಲಿ ಕಂಡುಬರುವ ಪ್ರೋಟೀನ್‌ಗಳು ಕರುಳಿನ ಚಲನೆಯನ್ನ ನಿಧಾನ ಗೊಳಿಸುತ್ತೆ. ಇದು ಉರಿಯೂತ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.

ಹುರಿದ ಹಾಗೂ ಸಂಸ್ಕರಿಸಿದ ಆಹಾರ
ಹುರಿದ ಅಥವಾ ಹೆಚ್ಚು ಸಂಸ್ಕರಿಸಿದ ಆಹಾರ ಕಾನ್ಸ್ಟಿಪೇಶನ್ ಗೆ ದೊಡ್ಡ ಮಟ್ಟದ ಕಾರಣ ಎಂದು ಹೇಳಬಹುದು. ಈ ಆಹಾರಗಳಲ್ಲಿ ಹೆಚ್ಚಿನ ಕೊಬ್ಬು ಮತ್ತು ಕಡಿಮೆ ಫೈಬರ್ ಇರುತ್ತೆ, ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಇರುವುದರಿಂದ ದೇಹದಲ್ಲಿ ನೀರಿನ ಅಂಶವನ್ನ ಕಡಿಮೆ ಮಾಡುತ್ತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!