ಹೊಸದಿಗಂತ ಡಿಜಿಟಲ್ ಡೆಸ್ಕ್:
ದಳಪತಿ ವಿಜಯ್ ಅಭಿನಯದ, ಬಹುನಿರೀಕ್ಷಿತ ‘ಜನ ನಾಯಗನ್’ ಚಿತ್ರವು ಜನವರಿ 9ಕ್ಕೇ ತೆರೆಗೆ ಬರಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯ ತಗಾದೆ ಹಾಗೂ ರಾಜಕೀಯ ಪ್ರೇರಿತ ಅಡೆತಡೆಗಳ ಹಿನ್ನೆಲೆಯಲ್ಲಿ ಈ ಚಿತ್ರದ ವಿವಾದ ಈಗ ಕೋರ್ಟ್ ಮೆಟ್ಟಿಲೇರಿದೆ. ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಕಾರಣಕ್ಕೇ ಸಿನಿಮಾವನ್ನು ಉದ್ದೇಶಪೂರ್ವಕವಾಗಿ ತಡೆಯಲಾಗುತ್ತಿದೆಯೇ ಎಂಬ ಅನುಮಾನ ಕೂಡ ದಟ್ಟವಾಗಿದೆ.
ಈ ವಿಳಂಬವು ಕೇವಲ ಒಂದು ಸಿನಿಮಾಗೆ ಸೀಮಿತವಾಗಿಲ್ಲ. ಕೆವಿಎನ್ ಸಂಸ್ಥೆಯು ತನ್ನ ಮೂರು ಪ್ರಮುಖ ಚಿತ್ರಗಳ ಬಿಡುಗಡೆಯನ್ನು ಸಾಲು ಸಾಲಾಗಿ ಪ್ಲ್ಯಾನ್ ಮಾಡಿತ್ತು:
ಜನ ನಾಯಗನ್: ಜನವರಿ 9 (ಈಗ ವಿಳಂಬ)
ಟಾಕ್ಸಿಕ್: ಮಾರ್ಚ್ 19
ಕೆಡಿ: ಏಪ್ರಿಲ್ ಅಂತ್ಯ
ನಿರ್ಮಾಣ ಸಂಸ್ಥೆಯ ಕಾರ್ಯತಂತ್ರದ ಪ್ರಕಾರ, ಒಂದು ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಮತ್ತೊಂದರ ಪ್ರಚಾರ ಕಾರ್ಯ ಆರಂಭವಾಗಬೇಕಿತ್ತು. ಆದರೆ ‘ಜನ ನಾಯಗನ್’ ಬಿಡುಗಡೆಯ ದಿನಾಂಕ ಅನಿಶ್ಚಿತವಾಗಿರುವುದರಿಂದ, ‘ಟಾಕ್ಸಿಕ್’ ಚಿತ್ರದ ಪ್ರಮೋಷನ್ ಹಾಗೂ ‘ಕೆಡಿ’ ಚಿತ್ರದ ಸಿದ್ಧತೆಗಳ ಮೇಲೆ ಇದು ನೇರ ಪರಿಣಾಮ ಬೀರಲಿದೆ. ಒಟ್ಟಿನಲ್ಲಿ, ‘ಜನ ನಾಯಗನ್’ ಯಾವಾಗ ರಿಲೀಸ್ ಆಗುತ್ತದೆಯೋ ಅದರ ಮೇಲೆಯೇ ಕೆವಿಎನ್ ಸಂಸ್ಥೆಯ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ



