ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಮಾರಿ ಕೊರೊನಾ, ಡೆಂಘಿ, ಮಂಗನ ಕಾಯಿಲೆಯೂ ಆಯಿತು ಈಗ ಗಡಿ ಜಿಲ್ಲೆಗಳಲ್ಲಿ ಹಕ್ಕಿಜ್ವರದ ಭಯ ಶುರುವಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕೋಳಿಗಳು ಸಾವನ್ನಪ್ಪುತ್ತಿರುವ ಘಟನೆ ಮುಂದುವರೆದಿದ್ದು, ಕಪ್ಪಗಲ್ಲು ಗ್ರಾಮದ ಬಳಿ ಇರುವ ಕೋಳಿ ಫಾರಂನಲ್ಲಿ 8000 ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ. ಈ ಹಿನ್ನೆಲೆಯಲ್ಲಿ ಕಪ್ಪಗಲ್ಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಶು ಸಂಗೋಪನಾ ಮತ್ತು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಸಂಡೂರು ತಾಲೂಕಿನ ಕುರೆಕುಪ್ಪ ಜಾನುವಾರು ಸಂವರ್ಧನ ಕೇಂದ್ರದಲ್ಲಿ ಕೋಳಿ ಸಾಕಣೆ ಮಾಡಲಾಗಿತ್ತು. ಇಲ್ಲಿ ಆರಂಭದಲ್ಲಿ ನಿತ್ಯ 20 ರಿಂದ 30 ಕೋಳಿ ಮೃತಪಟ್ಟರೆ, ನಂತರದ ದಿನಗಳಲ್ಲಿ ನಿತ್ಯ 100 ರಿಂದ 200 ಕೋಳಿಗಳು ಸಾವಿಗೀಡಾದವು. ಸಾವಿಗೆ ಹಕ್ಕಿ ಜ್ವರವೇ ಕಾರಣವೆಂದು ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದೆ.