ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ನಟರಿಗೆ ಡಿಸಿಎಂ ಡಿಕೆಶಿ ವಾರ್ನಿಂಗ್ ಕೊಟ್ಟಿರುವ ವಿಚಾರಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಪ್ರತಿಕ್ರಿಯೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರು ಅಧಿಕಾರ ದರ್ಪದಿಂದ ಹಾಗಂದಿರಬಹುದು. ಆದರೆ ನಮ್ಮ ಕಡೆಯಿಂದನೂ ತಪ್ಪಾಗಿದೆ. ಮನೆಯ ಹಬ್ಬಕ್ಕೆ ಕಲಾವಿದರು ಬರಬೇಕಾಗಿತ್ತು. ಆದ್ರೆ ಆಮಂತ್ರಣ ಸಿಕ್ಕಿಲ್ಲ ಅಂತಾ ಬಂದಿಲ್ಲ ಎಂದು ಹೇಳಿದ್ದಾರೆ.
ಆದರೆ ನಟ್ಟು ಬೋಲ್ಟ್ ಸರಿ ಮಾಡುತ್ತೇವೆ ಎನ್ನುವ ಪದ ಅಧಿಕಾರ ದರ್ಪದಿಂದ ಹೇಳಿರಬಹುದು ಎಂದು ಕೌಂಟರ್ ಕೊಟ್ಟಿದ್ದಾರೆ.