ಹೊಸದಿಗಂತ ವರದಿ ವಿಜಯಪುರ:
ಕಾರು ಹಾಗೂ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ ಘಟನೆ
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಬಸವನಬಾಗೇವಾಡಿ ರಸ್ತೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಆರೀಪ್ ವಡ್ಡೋಡಗಿ (35), ಮೈಬೂಬ್‌ಸಾಬ್ ಕರಜಗಿ (65) ಎಂದು ಗುರುತಿಸಲಾಗಿದೆ.
ಹೂವಿನ ಹಿಪ್ಪರಗಿಯಿಂದ ದೇವರಹಿಪ್ಪರಗಿಗೆ ಕಡೆಗೆ ಬರುತ್ತಿದ್ದ ಬೈಕ್ ಸವಾರರು ಹಾಗೂ ಬಸವನಬಾಗೇವಾಡಿ ಕಡೆಗೆ ಹೊರಟಿದ್ದ ಕಾರು ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ.
ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೈಕ್ ಗೆ ಡಿಕ್ಕಿ ಹೊಡೆದ ಬಳಿಕ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ.