ಚಲಿಸುತ್ತಿರುವಾಗಲೇ ಇಬ್ಭಾಗವಾದ ನಂದನ್ ಕಾನನ್​ ಎಕ್ಸ್​ಪ್ರೆಸ್​ ರೈಲು, ಬೆಚ್ಚಿಬಿದ್ದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಲಿಸುತ್ತಿರುವಾಗಲೇ ರಾಯಲು ಇಬ್ಭಾಗವಾಗಿರುವ ಘಟನೆ ಉತ್ತರ ಪ್ರದೇಶದ ಚಂದೌಲಿಯಲ್ಲಿ ನಡೆದಿದೆ. ದೀನ್ ದಯಾಳ್ ಜಂಕ್ಷನ್ ಬಳಿ ಸಂಭವಿಸಬಹುದಾದ ದೊಡ್ಡ ಅಪಾಯವೊಂದು ತಪ್ಪಿದೆ.

ಜಂಕ್ಷನ್‌ನಿಂದ ಹೊರಟ ರೈಲು ಸ್ವಲ್ಪ ದೂರ ಹೋದ ನಂತರ ಎರಡು ಭಾಗಗಳಾಗಿ ವಿಭಜನೆಯಾಯಿತು. ಕಪ್ಲಿಂಗ್ ಮುರಿದುಹೋದ ಕಾರಣ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ರೈಲು ದೆಹಲಿಯ ಆನಂದ್ ವಿಹಾರ್ ನಿಂದ ಒಡಿಶಾದ ಪುರಿಗೆ ಹೋಗುತ್ತಿತ್ತು. ಈ ಮಧ್ಯೆ, 12876 ನಂದನ್ ಕಾನನ್ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಎಸ್ 4 ಬೋಗಿಯ ಜೋಡಣೆ ಮುರಿದು ಬಿದ್ದಿದೆ. ಜೋಡಣೆಯಲ್ಲಿನ ಬಿರುಕು ಬಿಟ್ಟ ಕಾರಣ ರೈಲು ಎರಡು ಭಾಗವಾಯಿತು. ಈ ಸಮಯದಲ್ಲಿ, ರೈಲಿನೊಳಗೆ ಕುಳಿತಿದ್ದ ಪ್ರಯಾಣಿಕರಲ್ಲಿ ಭಯ ಮೂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!