ದೇಹದ ಒಳಗಿತ್ತು ಬರೋಬ್ಬರಿ 15 kg ಚಿನ್ನ: ನಟಿ ರನ್ಯಾ ರಾವ್ ಪೊಲೀಸ್ ವಶಕ್ಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ, ಗಣೇಶ್ ಜೊತೆಗಿನ ಪಟಾಕಿ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರನ್ಯಾ ರಾವ್‌ ಅವರನ್ನು ಬಂಧಿಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಲ್ಡ್​ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ರನ್ಯಾ ಅವರನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ನಟಿ ರನ್ಯಾ ಬರೋಬ್ಬರಿ 14.8 ಕೆ.ಜಿ ಚಿನ್ನದೊಂದಿಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ದುಬೈನಿಂದ ಬೆಂಗಳೂರಿಗೆ ಬಂದಿದ್ದ ನಟಿಯನ್ನು ನಾಗವಾರದ ಡಿಆರ್​ಐ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ.

ವ್ಯಾಪಾರದ ಉದ್ದೇಶಕ್ಕಾಗಿ ದುಬೈಗೆ ಹೋಗ್ತೀನಿ ಎಂದು ಹೇಳಿದ್ದ ರನ್ಯಾ ರಾವ್ ಕುರಿತು ದೆಹಲಿ ಡಿಆರ್​ಐ ಟೀಮ್​ಗೆ ಖಚಿತವಾದ ಮಾಹಿತಿ ಇತ್ತು. ನಿನ್ನೆ ಆಕೆ ಬರೋದಕ್ಕೂ 2 ಗಂಟೆ ಮೊದಲೇ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಹಾಗೂ ಪೊಲೀಸರು ಅಲರ್ಟ್ ಆಗಿ ಕಾದು ಕುಳಿತಿದ್ದರು.

ದುಬೈನಿಂದ ಎಮಿರೈಟ್ಸ್ ಫ್ಲೈಟ್​ನಲ್ಲಿ ನಟಿ ರನ್ಯಾ ರಾವ್‌ KIAL ವಿಮಾನ ನಿಲ್ದಾಣಕ್ಕೆ ಬಂದರು. 14.8 ಕೆ.ಜಿ ಚಿನ್ನದೊಂದಿಗೆ ಏರ್​ಪೋರ್ಟ್​ಗೆ ಬಂದಿಳಿದ ನಟಿ ರನ್ಯಾ ತನ್ನ ದೇಹದ ಒಳಗೆ ಚಿನ್ನದ ಬಿಲ್ಲೆಗಳನ್ನ ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಬೆಂಗಳೂರಿನಲ್ಲಿ ನಟಿ ರನ್ಯಾ ರಾವ್ ಲ್ಯಾಂಡ್​ ಆಗ್ತಿದ್ದಂತೆ ನಿನ್ನೆ ಸಂಜೆ 7:30ರ ಸುಮಾರಿಗೆ ಏರ್​​ಪೋರ್ಟ್‌ನಲ್ಲಿ DRI ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಂದು ವಿಚಾರಣೆಯ ಬಳಿಕ ನಟಿ ರನ್ಯಾ ರಾವ್ ಅವರನ್ನು CCH 82 ಕೋರ್ಟ್‌ಗೆ ಹಾಜರು ಪಡಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!