ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅರಣ್ಯ ಭೂಮಿಯನ್ನು ಒತ್ತುವರಿ ಕೇಸ್ ನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ರಿಲೀಫ್ ಸಿಕ್ಕಿದ್ದು, ರಮೇಶ್ ಅವರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂಬುದಾಗಿ ಹೈಕೋರ್ಟ್ ಗೆ ವಕೀಲ ಶಿವಾರೆಡ್ಡಿ ಎಂಬುವರು ರಿಟ್ ಪಿಟಿಷನ್ ಸಲ್ಲಿಸಿದ್ದರು. ಆದ್ರೆ ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಬಗ್ಗೆ ಮಾತನಾಡಿದ ಅವರು, ಚೌಡೇಶ್ವರಿ ತಾಯಿ ಆಣೆಗೂ ನಾನು ಅರಣ್ಯ ಇಲಾಖೆಯ ಒಂದು ಗುಂಟೆ ಜಮೀನು ಕೂಡ ಒತ್ತುವರಿ ಮಾಡಿಲ್ಲ. ನೀವು ಇಷ್ಟು ದಿನ ನೋಡಿದ್ದು ಬರೀ ಟ್ರಯಲ್. ಇನ್ಮೇಲೆ ಅಸಲಿ ಫಿಕ್ಚರ್ ಬರುತ್ತೆ ಎಂದರು.
ನಾನು ಶ್ರೀನಿವಾಸಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಿದ್ದೇನೆ. ನನ್ನ ಮೇಲಿನ ಆರೋಪಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ಅದೆಲ್ಲ ಬರೀ ಟ್ರಯಲ್. ಸೋಮವಾರದ ನಂತ್ರ ಅಸಲಿ ಸಿನಿಮಾ ಬರುತ್ತದೆ ಎಂದರು.