ಮೇಷ
ಕುಟುಂಬ ಸದಸ್ಯರ ಜತೆಗಿನ ಮನಸ್ತಾಪ ದೀರ್ಘಕಾಲ ಎಳೆಯದಿರಿ. ಅದಕ್ಕೆ ಅಂತ್ಯ ಹಾಡಿ. ವಿದ್ಯಾರ್ಥಿಗಳಿಗೆ ಪೂರಕ ಬೆಳವಣಿಗೆ.
ವೃಷಭ
ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ. ಆರ್ಥಿಕ ಗಳಿಕೆ ಹೆಚ್ಚಳ. ಸಣ್ಣ ಆರೋಗ್ಯ ಸಮಸ್ಯೆ. ವಿದ್ಯಾರ್ಥಿಗಳಿಗೆ ಕಠಿಣ ಶ್ರಮದಿಂದ -ಲ.
ಮಿಥುನ
ಮನೆಯಲ್ಲಿ ವಾಗ್ವಾದ ನಡೆದೀತು. ನಿಮ್ಮಿಂದ ಸಹನೆಯ ನಡೆ ಮುಖ್ಯ. ವೃತ್ತಿಯಲ್ಲಿ ಕಠಿಣ ಕಾರ್ಯ ಸಾಽಸುವಿರಿ. ವಿದ್ಯಾರ್ಥಿಗಳಿಗೆ ಶುಭದಿನ.
ಕಟಕ
ಕೌಟಂಬಿಕ ಉದ್ವಿಗ್ನತೆ. ಮನಸ್ತಾಪ ಉಂಟಾದೀತು. ನಿಮ್ಮ ನಡೆನುಡಿಯಲ್ಲಿ ವಿನಯವಿರಲಿ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಪಡಬೇಕು.
ಸಿಂಹ
ವೃತ್ತಿಯಲ್ಲಿ ಮೂಡಿದ್ದ ಸಮಸ್ಯೆ ಪರಿಹಾರ. ಹಣ ಗಳಿಕೆಯ ಹಾದಿ ನಿರಾಳ. ಧಾರ್ಮಿಕ ಚಟುವಟಿಕೆ ಹೆಚ್ಚಲಿದೆ.ಆರೋಗ್ಯ ಸುಸ್ಥಿರ.
ಕನ್ಯಾ
ಆಪ್ತರ ಜತೆ ಭಿನ್ನಾಭಿಪ್ರಾಯ. ಅದನ್ನು ವಿಕೋಪಕ್ಕೆ ಕೊಂಡು ಹೋಗದಿರಿ. ಆತ್ಮೀಯರ ಆರೋಗ್ಯದ ಚಿಂತೆ ಕಾಡಬಹುದು.
ತುಲಾ
ಹೆಚ್ಚುವರಿ ಹೊಣೆ ನಿಮ್ಮ ಹೆಗಲೇರಲಿದೆ. ಮಾತಿನ ಚಕಮಕಿಯಿಂದ ದೂರವಿರಿ. ಆರ್ಥಿಕ ಲಾಭ, ಆದರೆ ಸಿಕ್ಕಾಬಟ್ಟೆ ಖರ್ಚು ಮಾಡದಿರಿ.
ವೃಶ್ಚಿಕ
ಕೌಟುಂಬಿಕ ಪರಿಸರ ನೆಮ್ಮದಿ ತರಲಿದೆ. ಹೊಸ ಯೋಜನೆಯ ಹುಮ್ಮಸ್ಸು. ಆದರೆ ಸಾಧಕಬಾಧಕ ಯೋಚಿಸಿ ಹೆಜ್ಜೆಯಿಡಿ.ವಿದ್ಯಾರ್ಥಿಗಳಿಗೆ ಯಶ.
ಧನು
ಉತ್ತಮ ಕೌಟುಂಬಿಕ ಹೊಂದಾಣಿಕೆ. ವೃತ್ತಿಯಲ್ಲಿ ಯಾರೊಂದಿಗೂ ವಿರೋಧ ಕಟ್ಟಿಕೊಳ್ಳದಿರಿ. ವದಂತಿಗಳಿಗೆ ಹೆಚ್ಚು ಕಿವಿಗೊಡದಿರಿ.
ಮಕರ
ಅಜೀರ್ಣದಂತಹ ಸಮಸ್ಯೆ ಕಾಡಬಹುದು. ಆಹಾರ ಸೇವನೆಯಲ್ಲಿ ಎಚ್ಚರ ಅವಶ್ಯ. ವೃತ್ತಿಯಲ್ಲಿ ಉತ್ಸಾಹ ಕುಂದಿಸುವ ಬೆಳವಣಿಗೆ.
ಕುಂಭ
ಕೌಟುಂಬಿಕ ಶಾಂತಿ. ಸಮಸ್ಯೆ ಪರಿಹಾರದ ನಿರಾಳತೆ. ವಿದ್ಯಾರ್ಥಿಗಳು ಏಕಾಗ್ರತೆ ಕೆಡಿಸುವ ವಿಷಯಗಳಿಂದ ದೂರ ಇರಬೇಕು.
ಮೀನ
ನಿಮ್ಮ ಕಾರ್ಯಕ್ಕೆ ಕುಟುಂಬ ಸದಸ್ಯರ ಬೆಂಬಲ ಪಡೆಯುವಿರಿ. ಅವರ ಭಾವನೆಗೂ ಬೆಲೆ ಕೊಡಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ