ಬೇಕಾಗುವ ಪದಾರ್ಥಗಳು…
- ಎಣ್ಣೆ- 2 ಚಮಚ
- ಜೀರಿಗೆ- 1 ಚಮಚ
- ಈರುಳ್ಳಿ- 1 ಸಣ್ಣಗೆ ಹೆಚ್ಚಿದ್ದು
- ಉಪ್ಪು- ರುಚಿಗೆ ತಕ್ಕಷ್ಟು
- ಹಸಿಮೆಣಸಿನಕಾಯಿ- 1 ಸಣ್ಣಗೆ ಹೆಚ್ಚಿದ್ದು
- ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಅಚ್ಚಖಾರದ ಪುಡಿ- ಅರ್ಧ ಚಮಚ
- ಟೊಮೆಟೋ- 1 ಸಣ್ಣಗೆ ಹೆಚ್ಚಿದ್ದು
- ಅರಿಶಿನ- ಸ್ವಲ್ಪ
- ಗರಂ ಮಸಾಲಾ- ಅರ್ಧ ಚಮಚ
- ಪನೀರ್- 2 ಕಪ್ ನಷ್ಟು ಸಣ್ಣಗೆ ಪುಡಿಪುಡಿ ಮಾಡಿದ್ದು
- ಕಸೂರಿ ಮೇಥಿ- 1 ಚಮಚ
- ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಾಡುವ ವಿಧಾನ…
- ದೊಡ್ಡ ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿಕೊಳ್ಳಿ. ಅದಕ್ಕೆ ಜೀರಿಗೆ ಹಾಕಿ. ಅದು ಚಟಪಟ ಅಂದಮೇಲೆ ಹೆಚ್ಚಿದ ಈರುಳ್ಳಿ, ಹಸಿಮೆಣಸು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಸ್ವಲ್ಪ ಕೆಂಪಗಾಗುವವರೆಗೆ ಹುರಿಯಿರಿ.
- ನಂತರ ಹೆಚ್ಚಿದ ಟೊಮೆಟೋ ಹಾಕಿ ಅದು ಮೆತ್ತಗಾಗುವವರೆಗೆ ಕೈಯ್ಯಾಡಿಸಿ. ನಂತರ ಅಚ್ಚಖಾರದ ಪುಡಿ, ಅರಿಶಿನ, ಗರಂ ಮಸಾಲಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಇದನ್ನು ಸಣ್ಣ ಉರಿಯಲ್ಲಿ 1 ನಿಮಿಷ ಹಾಗೇ ಮಸಾಲೆಯನ್ನು ಹುರಿಯಿರಿ.
- ನಂತರ ಪುಡಿ ಮಾಡಿಟ್ಟುಕೊಂಡ ಪನೀರ್ ಹಾಕಿ. ಪನೀರ್ ಪೂರ್ತಿ ಮೆತ್ತಗಾಗಿ ಹೋಗದಂತೆ ನಿಧಾನವಾಗಿ ಕೈಯ್ಯಾಡಿಸಿ. ಸಣ್ಣ ಉರಿಯಲ್ಲಿ ಸುಮಾರು 3 ನಿಮಿಷ ಬಿಡಿ. ನಂತರ ಕಸೂರಿ ಮೇಥಿ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪನೀರ್ ಬುರ್ಜಿ ಸವಿಯಲು ಸಿದ್ಧ.