ವಿಶ್ವವಿದ್ಯಾಲಯಗಳನ್ನು ವಿಲೀನ ಮಾಡುತ್ತೇವೆ, ಮುಚ್ಚಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವಿದ್ಯಾಲಯಗಳ ಸ್ಥಗಿತ ಕುರಿತು ಸದನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಕೆಲವು ವಿವಿಗಳನ್ನು ಬೇರೆ ವಿವಿಗಳ ಜೊತೆ ವಿಲೀನ ಮಾಡುತ್ತಿದ್ದೇವೆ ಅಷ್ಟೇ. ವಿಶ್ವವಿದ್ಯಾಲಯಗಳು ನಾವು ಮುಚ್ಚುತ್ತಿದ್ದೇವೆ ಅಂತ ಅಲ್ಲ ಹೇಳಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ಸರ್ಟಿಫಿಕೇಟ್ ತೆಗೆದುಕೊಳ್ಳುವುದಕ್ಕೂ ಚಾಮರಾಜನಗರ, ಮಂಡ್ಯ ವಿಶ್ವವಿದ್ಯಾಲಯ ಸರ್ಟಿಫಿಕೇಟ್ ತೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಬಿವೈ ವಿಜಯೇಂದ್ರ ಅಕ್ಕನ ಮಗ ಪಿಇಎಸ್ ವಿಶ್ವವಿದ್ಯಾಲಯ ಓದಿದ್ದರು ಪ್ರವೇಶ ಸಿಗಲಿಲ್ಲ.ಎಸ್ ಎಂ ಕೃಷ್ಣ ವಿದೇಶಾಂಗ ಸಚಿವರಾಗಿದ್ದಾಗ ವಿದೇಶಿ ವಿಶ್ವ ವಿದ್ಯಾಲಯದಲ್ಲೂ ಪ್ರವೇಶ ಸಿಗಲಿಲ್ಲ ಎಂದು ತಿಳಿಸಿದರು.

ಬೆಂಗಳೂರು ವಿವಿ, ಮೈಸೂರು ವಿವಿಗೆ ಅವುಗಳದ್ದೇ ಆದಂತಹ ಸ್ಥಾನ ಮತ್ತು ಮೌಲ್ಯವಿದೆ. ಹೊಸ ವಿಶ್ವವಿದ್ಯಾಲಯಗಳನ್ನು ವಿಲೀನ ಮಾಡುತಿದ್ದೇವೆ.ಆದರೆ ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚಿಲ್ಲ. ಹೊಸ ವಿಶ್ವವಿದ್ಯಾಲಯಗಳಿಗೆ ಯಾವುದೇ ಉಪನ್ಯಾಸಕರು ಹೋಗುತ್ತಿರಲಿಲ್ಲ.ನೀವು ವಿಭಜನೆ ಮಾಡುತ್ತೀರಿ, ನಾವು ವಿಲೀನ ಮಾಡುತ್ತೇವೆ. ನಮಗೂ ನಿಮಗೂ ಇಷ್ಟೆ ವ್ಯತ್ಯಾಸವಿದೆ ನೀವು ಜನರನ್ನು ವಿಭಜಿಸುತ್ತೀರಿ, ನಾವು ಒಂದು ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!