BUDGET | ಬಜೆಟ್‌ ಮಂಡನೆ ಆರಂಭಿಸಿದ ಸಿಎಂ, ಗಾತ್ರ 4.09 ಲಕ್ಷ ಕೋಟಿ ರೂ.

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಎಂ ಸಿದ್ದರಾಮಯ್ಯ ಇಂದು ತಮ್ಮ ರಾಜಕೀಯ ಜೀವನದ 16ನೇ ಬಜೆಟ್‌ ಮಂಡನೆ ಆರಂಭಿಸಿದ್ದಾರೆ. ಮಂಡಿನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ಮೊದಲ ಹತ್ತು ನಿಮಿಷ ನಿಂತುಕೊಂಡು ನಂತರ ಕುಳಿತುಕೊಂಡು ಬಜೆಟ್‌ ಮಂಡನೆ ಮಾಡಲಿದ್ದಾರೆ.

ಕನ್ನಡಿಗರಿಗೆ ಸಿಎಂ ಕೃತಜ್ಞತೆ ಹೇಳಿದ್ದು, ಬಜೆಟ್‌ ಮಂಡನೆ ಆರಂಭಿಸಿದ್ದಾರೆ. ಈ ಬಾರಿಯ ಬಜೆಟ್‌ ಗಾತ್ರ 4.09 ಲಕ್ಷ ಕೋಟಿ ರೂ.ಎಂದು ಮಾಹಿತಿ ನೀಡಿದ್ದಾರೆ.

1995ರಲ್ಲಿ. ಎಚ್.ಡಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಮೊದಲ ಬಜೆಟ್‌ ಮಂಡಿಸಿದ್ದರು. 1995 ಮತ್ತು 1996ರಲ್ಲಿ ದೇವೇಗೌಡರು ಸಿಎಂ ಆಗಿದ್ದಾಗ, 1997, 1998, 1999ರಲ್ಲಿ ಜೆ.ಎಚ್‌. ಪಟೇಲ್‌ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿದ್ದರು.

2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು 2013, 2014, 2015, 2016, 2017 ಮತ್ತು 2018 (ಲೇಖಾನುದಾನ) ಹೀಗೆ ನಿರಂತರವಾಗಿ ಆರು ಬಾರಿ ಬಜೆಟ್‌ ಮಂಡಿಸಿದ್ದರು. 2018ರಲ್ಲಿ ಮಂಡಿಸಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಆಗಿರಲಿಲ್ಲ. ಇದು ಅವರು ಮಂಡಿಸಿದ 13ನೇ ಬಜೆಟ್‌ ಆಗಿತ್ತು.

2023ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರು 14ನೇ ಬಜೆಟ್‌ ಮಂಡಿಸಿ ಹೊಸ ದಾಖಲೆ ಬರೆದರು. ಈಗ 2025-26ನೇ ಸಾಲಿನ 16ನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!