ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಇಂದು ತಮ್ಮ ರಾಜಕೀಯ ಜೀವನದ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಹಣಕಾಸು ಅಧಿಕಾರಿಗಳಿಂದ ಬಜೆಟ್ ಪ್ರತಿ ಪಡೆದ ಸಿದ್ದರಾಮಯ್ಯ ವ್ಹೀಲ್‌ಚೇರ್‌ನಲ್ಲಿಯೇ ತೆರಳಿದ್ದಾರೆ.
ಸಿದ್ದರಾಮಯ್ಯಗೆ ಮಂಡಿನೋವಿನ ಸಮಸ್ಯೆ ಬಾಧಿಸುತ್ತಿದ್ದು, ಬಜೆಟ್ ಭಾಷಣದ ಮೊದಲ ಹತ್ತು ನಿಮಿಷ ಮಾತ್ರ ನಿಂತುಕೊಂಡು ಮಾತನಾಡಲಿದ್ದಾರೆ. ಅದಾದ ನಂತರ ಕುಳಿತುಕೊಂಡೇ ಭಾಷಣ ಮುಂದುವರಿಸಲಿದ್ದಾರೆ.