ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿಒಕೆಯಿಂದ ಪಾಕಿಸ್ತಾನ ಹೊರ ನಡೆದರೆ ಕಾಶ್ಮೀರದ ಸಮಸ್ಯೆ ಬಗೆ ಹರಿಯುತ್ತದೆ ಎಂಬ ಸಚಿವ ಎಸ್.ಜೈಶಂಕರ್ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ನಿಮ್ಮನ್ನು ಯಾರು ತಡೆದಿದ್ದಾರೆ? ಎಂದು ಅಬ್ದುಲ್ಲಾ ಜೈಶಂಕರ್ ರನ್ನು ಪ್ರಶ್ನಿಸಿದ್ದಾರೆ. ಪಿಒಕೆಯನ್ನು ಮರಳಿ ಪಡೆಯಲು ಸಾಧ್ಯವಾದರೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಹಾಜಿ ಪಿರ್ ಪಾಸ್ ಬಗ್ಗೆ ಕಾಂಗ್ರೆಸ್ ಅನ್ನು ಟೀಕಿಸುತ್ತೆ, ಆದರೆ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅದನ್ನು ಮರಳಿ ಪಡೆಯಲು ಅವಕಾಶವಿತ್ತು. ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಜಮ್ಮು ಮತ್ತು ಕಾಶ್ಮೀರದ ಒಂದು ಭಾಗ ಪಾಕಿಸ್ತಾನದ ನಿಯಂತ್ರಣದಲ್ಲಿದ್ದರೆ, ಇನ್ನೊಂದು ಭಾಗ ಚೀನಾದ ಆಕ್ರಮಣದಲ್ಲಿದೆ. ಅದರ ಬಗ್ಗೆ ಏಕೆ ಯಾರೂ ಮಾತನಾಡುವುದಿಲ್ಲ? ಎಂದು ಪ್ರಶ್ನಿಸಿದರು.