ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಳ್ಳೆ ಪದಗಳಲ್ಲಿ ಹೇಳೋದಕ್ಕೆ ಬರೋದಿಲ್ಲ. ಇದೊಂದು ಅಡ್ಡಕಸಬಿ, ಬೊಗಳೆಯಾಮಯ್ಯನ ಬಜೆಟ್ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸ್ವಲ್ಪವೂ ಅಭಿವೃದ್ಧಿ ಅನ್ನೋದಿಲ್ಲ, ದೂರದೃಷ್ಟಿ ಅನ್ನೋದಿಲ್ಲ. ಇದಕ್ಕೆ ಯಾರಾದ್ರೂ ಬಜೆಟ್ ಅಂತಾರಾ? ಔಟ್ಗೋಯಿಂಗ್ ಸಿಎಂ ಅಂತ ಜನ ನಿರ್ಧಾರ ಮಾಡಿ ಆಗಿದೆ. ಹಾಗಾಗಿ ಯಾರಿಗೂ ನಿಮ್ಮ ಬಜೆಟ್ ಬಗ್ಗೆ ನಿರೀಕ್ಷೆ ಇರಲಿಲ್ಲ. ಹಾಗಂತ ನಮ್ಮ ನಿರೀಕ್ಷೆ ಹುಸಿ ಆಗೋ ಬಜೆಟ್ ಇದಾಗಿರಲಿಲ್ಲ. ಎಲ್ಲರಿಗೂ ನಿರಾಸೆಯಾಗಿದೆ ಎಂದಿದ್ದಾರೆ.