ಮಹಿಳಾ ದಿನದಂದು ‘ಲಖ್ ಪತಿ’ ದೀದಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಮಹಿಳಾ ದಿನದಂದು ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಲಖ್ ಪತಿ ದೀದಿ’ಗಳೊಂದಿಗೆ ಸಂವಾದ ನಡೆಸಿದರು.

ಲಖ್ ಪತಿ ದೀದಿ ಸ್ವ-ಸಹಾಯ ಗುಂಪಾಗಿದ್ದು, ಆರ್ಥಿಕ ಸಾಕ್ಷರತೆ, ಕೌಶಲ್ಯ ಅಭಿವೃದ್ಧಿಯೊಂದಿಗೆ ಉದ್ಯಮಶೀಲತಾ ಉದ್ಯೋಗಗಳಿಗೆ ಸದಸ್ಯರನ್ನು ಸಬಲೀಕರಣಗೊಳಿಸುತ್ತವೆ. ಸರ್ಕಾರವು ಈ ಉಪಕ್ರಮವನ್ನು ಸಕ್ರಿಯವಾಗಿ ಬೆಂಬಲಿಸುತ್ತಿದೆ. ವೈವಿಧ್ಯಮಯ ಜೀವನೋಪಾಯ ಚಟುವಟಿಕೆಗಳನ್ನುಉತ್ತೇಜಿಸುವ ಯೋಜನೆಯ ಅನುಷ್ಠಾನಕ್ಕಾಗಿ ಹಲವು ವಲಯಗಳಲ್ಲಿ ಸಹಯೋಗವನ್ನು ಬೆಳೆಸುತ್ತಿದೆ ಎಂದರು.

ಇದೇ ಸಂಧರ್ಭದಲ್ಲಿ ಪ್ರಧಾನಿ ಗುಜರಾತ್ ಸರ್ಕಾರದ G-SAFAL (ಜೀವನೋಪಾಯವನ್ನು ವೃದ್ಧಿಸಲು ಅಂತ್ಯೋದಯ ಕುಟುಂಬಗಳಿಗೆ ಗುಜರಾತ್ ಯೋಜನೆ) ಮತ್ತು G-MAITRI (ಗ್ರಾಮೀಣ ಆದಾಯವನ್ನು ಪರಿವರ್ತಿಸಲು ಗುಜರಾತ್ ಮಾರ್ಗದರ್ಶನ ಮತ್ತು ವೇಗವರ್ಧನೆ) ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂವಾದದಲ್ಲಿ ಪ್ರಧಾನಿ ಜೊತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಸಾಥ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!