ದುಷ್ಕರ್ಮಿಗಳ ಅಟ್ಟಹಾಸ: ಇಸ್ರೇಲ್‌ ಮಹಿಳೆ ಸೇರಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುರುವಾರ ರಾತ್ರಿ ಹಂಪಿ ಬಳಿ ಸನಾಪುರ ಸರೋವರದ ದಡದಲ್ಲಿ 27 ವರ್ಷದ ಇಸ್ರೇಲಿ ಪ್ರವಾಸಿ ಮತ್ತು 29 ವರ್ಷದ ಹೋಂಸ್ಟೇ ನಿರ್ವಾಹಕಿ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.

ಪೊಲೀಸ್ ವರದಿಗಳ ಪ್ರಕಾರ, ರಾತ್ರಿ 11 ಗಂಟೆ ಸುಮಾರಿಗೆ ದಾಳಿ ನಡೆದಾಗ ಇಬ್ಬರು ಮಹಿಳೆಯರ ಜೊತೆ ಮೂವರು ಪುರುಷ ಪ್ರವಾಸಿಗರು ಇದ್ದರು, ಒಬ್ಬರು ಅಮೆರಿಕದಿಂದ ಮತ್ತು ಇಬ್ಬರು ಭಾರತದಿಂದ ಬಂದವರು ಎನ್ನಲಾಗಿದೆ.

ಮೋಟಾರ್ ಸೈಕಲ್‌ನಲ್ಲಿ ಬಂದ ಆರೋಪಿಗಳು ಮೊದಲು ಪೆಟ್ರೋಲ್ ಬಗ್ಗೆ ವಿಚಾರಿಸಿ ನಂತರ ಗುಂಪಿನಿಂದ 100 ರೂ. ಬೇಡಿಕೆ ಇಟ್ಟರು. ಪ್ರವಾಸಿಗರು ನಿರಾಕರಿಸಿದಾಗ, ಹಲ್ಲೆಕೋರರು ಹಿಂಸಾತ್ಮಕವಾಗಿ ತಿರುಗಿ, ಗುಂಪಿನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಪುರುಷರನ್ನು ಕಾಲುವೆಗೆ ತಳ್ಳಿ, ನಂತರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಭಾರತೀಯ ನ್ಯಾಯ ಸಂಹಿತಾದ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಸಾಮೂಹಿಕ ಅತ್ಯಾಚಾರ, ದರೋಡೆ ಮತ್ತು ಕೊಲೆಯತ್ನ ಆರೋಪಗಳು ಸೇರಿವೆ. ಆರೋಪಿಗಳನ್ನು ಪತ್ತೆಹಚ್ಚಲು ನಾವು ಆರು ವಿಶೇಷ ತಂಡಗಳನ್ನು ರಚಿಸಿದ್ದೇವೆ. ಮಹಿಳೆಯರ ದೂರಿನ ನಂತರ ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಮತ್ತು ತನಿಖೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!