ಮೋದಿ ಕಂಡು ಭಾವುಕನಾದ ಯುವಕ: ದೀಢಿರ್ ಪ್ರಧಾನಿ ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ನ ಸೂರತ್‌ನಲ್ಲಿ ಇಂದು ಪ್ರಧಾನಿ ಮೋದಿ ರೋಡ್‌ ಶೋ ನಡೆಸಿದ್ದಾರೆ. ಈ ವೇಳೆ ಸೂರತ್‌ನ ಬೀದಿಗಳಲ್ಲಿ ಸಾವಿರಾರು ಮಂದಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಕಾದಿದ್ದರು. ಬಿಜೆಪಿ ಧ್ವಜವನ್ನು ಹಾರಿಸಿ, ಘೋಷಣೆಗಳನ್ನು ಕೂಗಿ, ಹೂವುಗಳನ್ನು ತೂರಿ, ಸ್ವಾಗತಿಸಿದರು.

ಈ ನಡುವೆ ಒಂದು ಭಾವುಕ ಕ್ಷಣವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅದೇನೆಂದರೆ, ಪ್ರಧಾನಿ ವೇದಿಕೆಗೆ ತೆರೆದ ಜೀಪ್‌ನಲ್ಲಿ ಆಗಮಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬನ ಭಾವುಕ ಪ್ರತಿಕ್ರಿಯೆಯನ್ನು ಗುರುತಿಸಿದ ಪ್ರಧಾನಿ ನರೇಂದ್ರ ಮೋದಿ, ಅವರ ಬಳಿಯಲ್ಲಿ ಗಾಡಿ ಅನ್ನು ನಿಲ್ಲಿಸಿ ಅವರು ಹಿಡಿದುಕೊಂಡಿದ್ದ ಪೇಂಟಿಂಗ್‌ಗೆ ಸಹಿ ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿ. ತಾಯಿ ಹೀರಾಬೆನ್‌ ಮೋದಿ ಇರುವ ಚಿತ್ರವನ್ನು ಪೇಟಿಂಗ್‌ ಮಾಡಲಾಗಿತ್ತು. ಪ್ರಧಾನ ಮಂತ್ರಿ ತಮ್ಮನ್ನು ಗುರುತಿಸಿ, ತಾವು ತಂದಿದ್ದ ಪೇಟಿಂಗ್‌ಗೆ ಸಹಿ ಹಾಕಿದ ಬಳಿಕ, ಆ ವ್ಯಕ್ತಿಯ ಕಣ್ಣುಗಳು ಭಾವುಕವಾಗಿ ಅರಳಿದ್ದ ಕ್ಷಣವನ್ನು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

https://x.com/BJP4India/status/1898012317020778517?ref_src=twsrc%5Etfw%7Ctwcamp%5Etweetembed%7Ctwterm%5E1898012317020778517%7Ctwgr%5Ebb14a926f95fd0a87831c7c9910a1e8562355cef%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FBJP4India%2Fstatus%2F1898012317020778517%3Fref_src%3Dtwsrc5Etfw

ಬಿಜೆಪಿ ಎಕ್ಸ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. “ಪ್ರಧಾನಿ ಮೋದಿ ಕೇವಲ ನಾಯಕರಲ್ಲ, ಬದಲಾಗಿ ಹಲವರಿಗೆ ಒಂದು ಭಾವನೆ. ಈ ವೀಡಿಯೊದಲ್ಲಿರುವ ಒಬ್ಬ ವ್ಯಕ್ತಿ ಪ್ರಧಾನಿಯಿಂದಲೇ ಸಹಿ ಪಡೆಯುತ್ತಿರುವಾಗ ಅವರ ಹೃದಯಸ್ಪರ್ಶಿ ಕ್ಷಣವನ್ನು ನೋಡಿ ” ಎಂದು ಬರೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!