ಹೊಸ ದಿಗಂತ ವರದಿ, ಅಂಕೋಲಾ :
ಸುಮಾರು 50ಕ್ಕೂ ಹೆಚ್ಚು ಜನರಿಗೆ ಜೇನು ದಾಳಿ ನಡೆಸಿ ಅದರಲ್ಲಿ ಒರ್ವ ವ್ಯಕ್ತಿಯ ಮೇಲೆ 50ಕ್ಕೂ ಹೆಚ್ಚು ಜೇನು ದಾಳಿ ನಡೆಸಿದ ಘಟನೆ ತಾಲೂಕಿನ ಬಸ್ ನಿಲ್ದಾಣ ಮತ್ತು ಪುರಸಭೆ ರಸ್ತೆಯಲ್ಲಿ ಭಾನುವಾರ ಮದ್ಯಾಹ್ನ ನಡೆದಿದೆ.
ಪುರಸಭೆ ಎದುರು ಇರುವ ಮರದಲ್ಲಿ ಇರುವ ಭಾರಿ ಗಾತ್ರದ ಜೇನುಗೂಡಿನ ಗುಂಪೊಳಗಿಂದ ಹಾರಿಬಂದ ಜೇನ್ನೊಣಗಳು ಇದ್ದಕ್ಕಿದ್ದಂತೆ ರಸ್ತೆಯ ಮೇಲೆ ಸಂಚರಿಸುವ ಜನರ ಮೇಲೆ ಮತ್ತು ಸ್ಥಳೀಯ ಅಂಗಡಿಕಾರರು ಸೇರದಂತೆ ಕಾರು ಮತ್ತು ರೀಕ್ಷಾ ಚಾಲಕರ ಮೇಲೆಯು ದಾಳಿ ನಡೆಸಿದೆ.
ಕೆಎಲ್ಇ ಮತ್ತು ಬಸ್ ನಿಲ್ದಾಣ ರಸ್ತೆಯಲ್ಲಿ ಸಂಚರಿಸುವ ಜನರು ಗಲಿಬಿಲಿಗೊಂಡು ಜೇನು ದಾಳಿ ತಪ್ಪಿಸಲು ಓಡಿಹೋಗಿದ್ದಾರೆ. ಜೇನು ದಾಳಿಗೋಳಗಾದವರು ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದರೆ. ಇನ್ನೂ ಕೆಲವರು ಮನೆಗೆ ಹೋಗಿದ್ದಾರೆ. ಇನ್ನು ಓರ್ವನಿಗೆ ಸುಮಾರು 50ಕ್ಕೂ ಹೆಚ್ಚು ಜೇನುನೋಣ ಮುತ್ತಿಕ್ಕಿದ್ದು ಆತನ ಎದರು ಯಾರು ರಕ್ಷಣೆಗೆ ಹೋಗದ ಹಾಗೆ ಆಗಿತ್ತು ಅಲ್ಲೆ ಇದ್ದ ವ್ಯಕ್ತಿಯೋರ್ವ ತಾನು ಉಟ್ಟಿಕೊಂಡ ಲುಂಗಿಯನ್ನೆ ಆತನಿಗೆ ಮುಚ್ಚಿಕೊಳ್ಳಲು ಕೊಟ್ಟಿದ್ದಾನೆ. ಕೇಲಹೊತ್ತಿನ ಬಳಿಕ ಆತ ಜೇನುದಾಳಿಯಿಂದಾಗಿ ನಿತ್ರಾಣ ಗೊಂಡು ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಅಂಕೋಲಾ ವಲಯ ಅರಣ್ಯಧಿಕಾರಿ ಪ್ರಮೋದ ನಾಯಕ ತಮ್ಮ ಸಿಬ್ಬಂದಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ.